Karnataka BJP | ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ
ಬೆಂಗಳೂರು : ಮಾನ್ಯ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ.
ಕಾಂಗ್ರೆಸ್ ಅನ್ನುವುದೊಂದು ಸ್ವಾತಂತ್ರ್ಯ ಚಳುವಳಿ ಅಷ್ಟೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಮೋದಿಜೀ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ನಿಮ್ಮ ಸರ್ಕಾರಕ್ಕೆ ಹೆದರುತ್ತಾ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ತಿರುಗೇಟು ನೀಡಿದ್ದು, ಮಾನ್ಯ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ.
ಕಾಂಗ್ರೆಸ್ ಅನ್ನುವುದೊಂದು ಸ್ವಾತಂತ್ರ್ಯ ಚಳುವಳಿ ಅಷ್ಟೇ. ರಾಜಕೀಯ ಕಾಂಗ್ರೆಸ್ ಪಕ್ಷಕ್ಕೂ, ಕಾಂಗ್ರೆಸ್ ಚಳುವಳಿಗೂ ಸಂಬಂಧವೇ ಇಲ್ಲ.

ಎಲ್ಲವನ್ನೂ ಹೈಜಾಕ್ ಮಾಡಿದ್ದೀರಿ ಅಷ್ಟೇ, ಅಸಲಿ ಗಾಂಧಿಯನ್ನೂ ಎಂದು ಕುಟುಕಿದೆ.
ಸರ್ಕಾರಕ್ಕೆ ಕಾಂಗ್ರೆಸ್ ಹೆದರುವುದು ಬೇಡ, ಅದರ ಅಗತ್ಯವೂ ಇಲ್ಲ. ಏಕೆಂದರೆ ಕಾಂಗ್ರೆಸ್ ಅಸ್ತಿತ್ವವೇ ಶೂನ್ಯ.
ನೀವು ಈ ನೆಲದ ಕಾನೂನಿನ ಬಗ್ಗೆ, ಈ ನೆಲದ ಸಂವಿಧಾನ ಮೇಲೆ ಭಯ ಇಟ್ಟುಕೊಂಡರೆ ಸಾಕು.
https://twitter.com/BJP4Karnataka/status/1536584468537823232?s=20&t=VsirxCjgRAouPBbtkX0qzg
ಆದರೆ ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು ನೀವಿಂದು ಸಂವಿಧಾನವನ್ನು ಕಾಲಡಿಗೆ ಹಾಕುತ್ತಿದ್ದೀರಿ, ಅಕ್ಷಮ್ಯವಿದು.
ಬಿಜೆಪಿ ಶೂನ್ಯದಿಂದ ಬೆಳೆದಿರುವ ಪಕ್ಷ, ಯಾರದ್ದೋ ಶ್ರೇಯವನ್ನು ಬೆನ್ನಿಗೆ ಅಂಟಿಸಿಕೊಂಡು ಬಂದಿಲ್ಲ.
https://twitter.com/BJP4Karnataka/status/1536585726476726272?s=20&t=VsirxCjgRAouPBbtkX0qzg
ಸಿದ್ದರಾಮಯ್ಯ ಪಕ್ಷಾಂತರದ ಇತಿಹಾಸ ನೋಡಿದರೆ, ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಆಯಸ್ಸು ಮುಗಿದಂತೆ ಭಾಸವಾಗುತ್ತಿದೆ.
ಸಿಎಂ ಅಭ್ಯರ್ಥಿಯೆಂದು ಘೋಷಿಸದಿದ್ದರೆ ಮುಂದುವರಿಯುತ್ತೀರಾ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
Karnataka BJP The Congress does not fight for the independence of the country








