ಸರ್ಕಾರಿ ವೆಬ್ ಸೈಟ್ ಮತ್ತು ಡೇಟಾ ಸುರಕ್ಷತೆಗಾಗಿ 24*7 ಸೈಬರ್ ಭದ್ರತಾ ಕಾರ್ಯಚರಣೆ…
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಸರ್ಕಾರಿ ವೆಬ್‌ಸೈಟ್‌ಗಳು, ಆನ್‌ಲೈನ್ ಸೇವೆಗಳು ಮತ್ತು ಡೇಟಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 24×7 ಸೈಬರ್ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಲಾಗುವುದ ಎಂದು ಘೋಷಿಸಿದ್ದಾರೆ.
· ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಯಲ್ಲಿ 31 ಕೋಟಿ ರೂ ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಟ್ರ್ಯಾಕ್‌ಗಳು ಬರಲಿವೆ.
· ಆಟೋ, ಟ್ಯಾಕ್ಸಿ ಮತ್ತು ಲಾರಿ ಚಾಲಕರಿಗೆ ಮತ್ತು ವಿತರಣಾ ಸೇವೆಗಳಲ್ಲಿ ಉದ್ಯೋಗಿಗಳಿಗೆ, ‘ಮುಖ್ಯ ಮಂತ್ರಿ ವಿಮಾ ಯೋಜನೆ’ ಅಡಿಯಲ್ಲಿ ನಾಲ್ಕು ಲಕ್ಷ ರೂಪಾಯಿ ವಿಮೆಯನ್ನು ನೀಡುವ ಯೋಜನೆ
· 2023-24ರಲ್ಲಿ 1,200 ಹೊಸ ಬಸ್‌ಗಳನ್ನು ಖರೀದಿಸಲು ಸರ್ಕಾರ 500 ಕೋಟಿ ರೂ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ
· ವಕೀಲರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು 100 ಕೋಟಿ ರೂಪಾಯಿ ಕಾರ್ಪಸ್ ನಿಧಿಯನ್ನು ಪ್ರಾರಂಭಿಸಲು 50% ಮೊತ್ತವನ್ನು ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
karnataka budget 2023 : 24*7 cyber security operation for government website and data security…