ಚಿಕ್ಕಬಳ್ಳಾಪುರ : ಇಷ್ಟು ದಿನಗಳ ವರೆಗೂ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಕಾಲ ಕಳೆದಿದ್ದ ಜನರೆಲ್ಲರೂ ಇದೀಗ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಅನೇಕ ಪ್ರವಾಸಿಗಳಿಗೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅದರಲ್ಲೂ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಈಗ ಅಂದ್ರೆ ಮಳೆಗಾಲದಲ್ಲಿ ನಂದಿ ಬೆಟ್ಟ ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಬೆಳ್ಳಂಬೆಳಗ್ಗೆ ಸೂರ್ಯೋದಯದ ವೇಳೆಗೆ ನಂದಿ ಬೆಟ್ಟದ ಸುತ್ತಲೂ ಅಕ್ಷರ ಸಹ ಸ್ವರ್ಗದಂತೆ ಕಾಣಿಸುತ್ತೆ. ಹೀಗಾಗಿಯೇ ಸಾಕಷ್ಟು ಜನರು ನಂದಿ ಬೆಟ್ಟಕ್ಕೆ ಪ್ರವಾಸಕ್ಕೆ ಹೋಗುತ್ತಾರೆ. ಇದೀಗ ಪ್ರಕೃತಿಯ ಸೌಂದರ್ಯ ಸವಿಯಲು ನಂದಿ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳುತ್ತಿರುವ ಪ್ರವಾಸಿಗರಿಗೆ ನಿರಾಸೆಯುಂಟಾಗಿದೆ. ಯಾಕಂದ್ರೆ ಕೊರೊನಾ ಆತಂಕದ ಹಿನ್ನೆಲೆ ಲಾಕ್ ಡೌನ್ ಅವಧಿ ಮುಗಿದರೂ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧನ ಹೇರಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೂ ಕೆಲ ಪ್ರವಾಸಿಗರು ನಂದಿಬೆಟ್ಟಕ್ಕೆ ಹೋಗುತ್ತಿದ್ದಾರೆ. ಮುಂಜಾನೆಯೇ ನೂರಾರು ಬೈಕ್ ಗಳು ಬೆಟ್ಟದ ಕ್ರಾಸ್ ನತ್ತ ತೆರಳಿದ್ದು, ಎಂಟ್ರಿ ಕ್ಲೋಸ್ ಆಗಿರುವುದನ್ನು ಕಂಡು ನಿರಾಸೆಯಿಂದ ಮತ್ತೆ ಮನೆಗಳತ್ತ ಹಿಂತಿರುಗುತ್ತಿದ್ದಾರೆ.
ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...






