ಓಂ ಬಿರ್ಲಾ ಆಹ್ವಾನಕ್ಕೆ ಕಾಂಗ್ರೆಸ್ | ಟ್ವಿಟ್ಟರ್ ನಲ್ಲಿ ಬಿಜೆಪಿ ಕಿಡಿ

1 min read
Priyanka Gandhi saaksha tv

ಓಂ ಬಿರ್ಲಾ ಆಹ್ವಾನಕ್ಕೆ ಕಾಂಗ್ರೆಸ್ | ಟ್ವಿಟ್ಟರ್ ನಲ್ಲಿ ಬಿಜೆಪಿ ಕಿಡಿ

ಬೆಂಗಳೂರು : ವಿಧಾನಮಂಡಲದ ಉಭಯ ಸದನದಲ್ಲಿ ಲೋಕಸಭಾ ಸ್ಪೀಕರ್ ಅವರು ಭಾಷಣ ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಸಂಸದೀಯ ಮೌಲ್ಯಗಳ ರಕ್ಷಣೆ’ ವಿಷಯದ ಕುರಿತಾಗಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸಲಾಗಿದೆ.

ಆದರೆ ಇದು ಸತ್ ಸಂಪ್ರದಾಯವಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಸಂಸದೀಯ ಮೌಲ್ಯಗಳನ್ನೇ ಪ್ರಶ್ನೆ ಮಾಡುತ್ತಿದೆ ಎಂದು ಟೀಕಿಸಿದೆ.

Karnataka saaksha tv

ಸಂಸತ್ ಕಲಾಪದಲ್ಲಿ ಕಣ್ಣು ಮಿಟುಕಿಸುವವರ ಮಾತೇ ಸರ್ವಶ್ರೇಷ್ಠ ಎಂದು ಕಾಂಗ್ರೆಸ್ ಭಾವಿಸಿದೆ. ಹೀಗಾಗಿ, ಲೋಕಸಭಾ ಸ್ಪೀಕರ್ ಅವರನ್ನು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವುದನ್ನು ಕೆಟ್ಟ ಸಂಪ್ರದಾಯ ಎನ್ನುತ್ತಿದೆ. ಲೋಕಸಭಾ ಸ್ಪೀಕರ್ ಅವರ ಬದಲಿಗೆ ನ್ಯಾಶನಲ್ ಹೆರಾಲ್ಡ್ ಹಗರಣದ ಆರೋಪಿಗಳನ್ನು ಆಹ್ವಾನಿಸಬೇಕಿತ್ತೇ ಎಂದು ಬಿಜೆಪಿ ಕುಟುಕಿದೆ.

ಇನ್ನು ಕಾಂಗ್ರೆಸ್ ಟ್ವೀಟ್ ಮಾಡಿ, ಲೋಕಸಭಾ ಸ್ಪೀಕರ್ ಅವರು ವಿಧಾನಮಂಡಲದ ಉಭಯ ಸದನದಲ್ಲಿ ಭಾಷಣ ಮಾಡುವ ಬಗ್ಗೆ ಬಿಜೆಪಿ ಸರ್ಕಾರ ನಮ್ಮೊಂದಿಗೆ ಚರ್ಚಿಸಿಲ್ಲ. ಹೀಗೆ ಭಾಷಣ ಮಾಡಿಸುವುದು ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಗರಂ ಆಗಿದೆ.

ಇನ್ನು ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ ಬಿಜೆಪಿ. ರಾಜ್ಯಪಾಲ, ರಾಷ್ಟ್ರಪತಿಗಳಿಗಷ್ಟೇ ಸದನದಲ್ಲಿ ಭಾಷಣಕ್ಕೆ ಅವಕಾಶವಿರುವುದು, ಆದರೆ ಲೋಕಸಭೆಯ ಸ್ಪೀಕರ್ ಅವರನ್ನ ಕರೆಸಿ ನಿಯಮ ಮೀರುತ್ತಿದೆ ಸರ್ಕಾರ. ಯಾರ ಆದೇಶ ಪಾಲಿಸುತ್ತಿರುವಿರಿ ಬಿಜೆಪಿ? ನಾಗಪುರದ್ದೋ, ಸರ್ವಾಧಿಕಾರಿ ಜೋಡಿಯದ್ದೋ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd