Congress | ಯಾವ ಮುಖವಿಟ್ಟುಕೊಂಡು ಬಂಡವಾಳ ಹೂಡಿಕೆಗೆ ಆಹ್ವಾನಿಸುತ್ತಿರುವಿರಿ?

1 min read
CM Bommai Saaksha Tv

Congress | ಯಾವ ಮುಖವಿಟ್ಟುಕೊಂಡು ಬಂಡವಾಳ ಹೂಡಿಕೆಗೆ ಆಹ್ವಾನಿಸುತ್ತಿರುವಿರಿ?

ಬೆಂಗಳೂರು : ಶೈಕ್ಷಣಿಕ ಕ್ಷೇತ್ರವನ್ನು ಕೊಳಕು ಸೈದ್ದಂತಿಕ ರಾಜಕಾರಣದ ಟೂಲ್ ಕಿಟ್ ಮಾಡಿಕೊಂಡಿರುವ ಪರಿಣಾಮ ಮಾನವ ಸಂಪನ್ಮೂಲದ ಗುಣಮಟ್ಟ ಕುಸಿದಿದೆ. ಉನ್ನತ ಶಿಕ್ಷಣದಿಂದ ಯುವಕರು ದೂರಾಗುತ್ತಿದ್ದಾರೆ. ಇಂತಹಾ ಹಲವು ಲೋಪಗಳನ್ನು ಸೃಷ್ಟಿಸಿ ಯಾವ ಮುಖವಿಟ್ಟುಕೊಂಡು ಬಂಡವಾಳ ಹೂಡಿಕೆಗೆ ಆಹ್ವಾನಿಸುತ್ತಿರುವಿರಿ? ಹೂಡಿಕೆದಾರರು ಹಿಂದೇಟು ಹಾಕುವುದಿಲ್ಲವೇ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ಘಟಕ ಪ್ರಶ್ನೆ ಮಾಡಿದೆ.

ಟ್ವಿಟ್ಟರ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಮುಖ್ಯಮಂತ್ರಿಗಳೇ, ಬಂಡವಾಳ ಹೂಡಿಕೆಯ ಆಕರ್ಷಣೆಗೆ ಇದ್ದ ಎಲ್ಲಾ ಅರ್ಹತೆಗಳನ್ನು ಕೆಡಿಸಿಹಾಕಿದ್ದೀರಿ. ರಸ್ತೆಗುಂಡಿಗಳನ್ನು ಸರಿಪಡಿಸಲಿಲ್ಲ, 40% ಕಮಿಷನ್ ತಾಂಡವವಾಡುತ್ತಿದೆ, ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ, ನೈತಿಕ ಪೊಲೀಸ್‌ಗಿರಿಗೆ ಉತ್ತೇಜಿಸುತ್ತಿರುವಿರಿ.

ಮಾನ್ಯ ಮುಖ್ಯಮಂತ್ರಿಗಳು ದಾವೊಸ್‌ನಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಆದರೆ ಹೂಡಿಕೆಗೆ ರಾಜ್ಯದ ಯಾವ ಪೂರಕ ವಾತಾವರಣವನ್ನು ಅವರಲ್ಲಿ ವಿವರಿಸುತ್ತಿದ್ದಾರೆ? ಒಂದೆಡೆ ‘ಬ್ರಾಂಡ್ ಬೆಂಗಳೂರು’ ಮಂಕಾಗಿದೆ ಎಂದು ಇಲ್ಲಿನ ಉದ್ಯಮಿಗಳು, ಅವರದ್ದೇ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಸ್ವಯಂ ಸೇವಕರನ್ನು ಹೆಡಗೇವಾರ್ ತಡೆದಿದ್ದು. #ಆರೆಸ್ಸೆಸ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರ ಪರ ವಹಿಸಿದ್ದು. ಮತ್ತು  ಸ್ವಾತಂತ್ರ್ಯ ಬಂದು 50 ವರ್ಷದ ವರೆಗೂ ದೇಶದ ಬಾವುಟಕ್ಕೆ ಮಾನ್ಯತೆ ನೀಡದೇ ದೇಶದ್ರೋಹ ಎಸಗಿದ್ದು. ಈ ಸತ್ಯಗಳನ್ನೂ ತಿಳಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Karnataka congress slams bjp cm basavaraja bommai

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd