Karnataka Congress | ಕಾಂಗ್ರೆಸ್ ಅವಧಿಯಲ್ಲಿ – ಐಟಿ ಸಿಟಿ. ಬಿಜೆಪಿ ಅವಧಿಯಲ್ಲಿ – ಡ್ರಗ್ಸ್ ಸಿಟಿ
ಬೆಂಗಳೂರು : ಬೆಂಗಳೂರು. ಕಾಂಗ್ರೆಸ್ ಅವಧಿಯಲ್ಲಿ – ಐಟಿ ಸಿಟಿ. ಬಿಜೆಪಿ ಅವಧಿಯಲ್ಲಿ – ಡ್ರಗ್ಸ್ ಸಿಟಿ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ಸಿಲಿಕಾನ್ ಸಿಟಿ ಈಗ ಡ್ರಗ್ಸ್ ಹಬ್ ಎಂಬ ಕುಖ್ಯಾತಿ ಪಡೆಯುವತ್ತ ದಾಪುಗಾಲಿಡುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರು ಗಾರ್ಡನ್ ಸಿಟಿ, ಐಟಿ ಹಬ್, ಟೆಕ್ನಾಲಜಿ ಹಬ್ ಎಂದೆಲ್ಲ ಹೆಸರು ಪಡೆದಿತ್ತು, ಬಿಜೆಪಿ ಆಡಳಿತದಲ್ಲಿ ಡ್ರಗ್ಸ್ ಹಬ್ ಎಂಬ ಕುಖ್ಯಾತಿ ಪಡೆಯುತ್ತಿದೆ. ಸ್ವತಃ ಬಿಜೆಪಿ ಪ್ರಚಾರಕರೇ ಡ್ರಗ್ ಪೆಡ್ಲರ್‌ಗಳಾಗಿರುವುದನ್ನು ರಾಜ್ಯ ಕಂಡಿದೆ, ಡ್ರಗ್ಸ್ ಪ್ರಿಯರಿಗೆ ಈಗ ಬೆಂಗಳೂರೇ ಮೆಚ್ಚಿನ ತಾಣವಾಗಿ ನಿರ್ಮಿಸಿಕೊಟ್ಟಿದೆ ಸರ್ಕಾರ.
https://twitter.com/INCKarnataka/status/1536725105996271616?s=20&t=3FrUiIAVcql0a0dalzMGlA
ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರಿದೆ, ಬಹುಕೋಟಿ ಡ್ರಗ್ಸ್‌ಗಳ ವ್ಯವಹಾರ ನಡೆಯುತ್ತಿದೆ. ತಮ್ಮಲ್ಲೇ ಡ್ರಗ್ ಪೆಡ್ಲರ್ ಗಳನ್ನು ಇಟ್ಟುಕೊಂಡಿರುವ ಬಿಜೆಪಿ ಸರ್ಕಾರದ ‘ಡ್ರಗ್ಸ್ ಮುಕ್ತ ಕರ್ನಾಟಕ’ ಎಂಬ ತೋರಿಕೆಯ ಅಭಿಯಾನವು ‘ಡ್ರಗ್ಸ್ ಯುಕ್ತ ಕರ್ನಾಟಕ’ವಾಗಿ ಮಾರ್ಪಟ್ಟಿದೆ.
ಬೆಂಗಳೂರು. ಕಾಂಗ್ರೆಸ್ ಅವಧಿಯಲ್ಲಿ – ಐಟಿ ಸಿಟಿ. ಬಿಜೆಪಿ ಅವಧಿಯಲ್ಲಿ – ಡ್ರಗ್ಸ್ ಸಿಟಿ . ಬೆಂಗಳೂರಿನ ಖ್ಯಾತಿಯನ್ನು ಕುಖ್ಯಾತಿಯನ್ನಾಗಿ ಪರಿವರ್ತಿಸಿದ್ದೆ ಬಿಜೆಪಿ ಸಾಧನೆ! ಗುಜರಾತ್‌ನಲ್ಲಿ ಪ್ರವೇಶ, ಬೆಂಗಳೂರಲ್ಲಿ ವ್ಯಾಪಾರ. ಎರಡು ಬಿಜೆಪಿ ಆಡಳಿತದ ರಾಜ್ಯಗಳೇ ಡ್ರಗ್ ಪೆಡ್ಲರ್‌ಗಳಿಗೆ ಪ್ರಿಯ ಸ್ಥಾನ ಎಂದು ಕಾಂಗ್ರೆಸ್ ಕುಟುಕಿದೆ.








