ದೇಶದಲ್ಲಿ ಅತಿ ಭಯಂಕರ ಭ್ರಷ್ಟಾಚಾರದ ಕೂಪ ಸೃಷ್ಟಿಸಿದ್ದೇ CONGRESS
ಬೆಂಗಳೂರು : ದೇಶದಲ್ಲಿ ಅತಿ ಭಯಂಕರ ಭ್ರಷ್ಟಾಚಾರದ ಕೂಪ ಸೃಷ್ಟಿಸಿದ್ದೇ ಕಾಂಗ್ರೆಸ್ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. Karnataka congress vs Karnataka bjp tweet war
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾಸ್ತ್ರ ಮುಂದುವರೆದಿದ್ದು, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ದೇಶದಲ್ಲಿ ಅತಿ ಭಯಂಕರ ಭ್ರಷ್ಟಾಚಾರದ ಕೂಪ ಸೃಷ್ಟಿಸಿದ್ದೇ ಕಾಂಗ್ರೆಸ್. ನಕಲಿ ಗಾಂಧಿ ಕುಟುಂಬವೇ ಈ ಗಂಗೋತ್ರಿಯ ಪ್ರಧಾನ ಪಾಲುದಾರರು.ಹಾಗಾದರೆ, #ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು ಗುಂಪಿನಲ್ಲಿರುವವರು ಯಾರು ಎಂದು ಪ್ರಶ್ನಿಸಿದೆ.
ಅಲಿಬಾಬಾ ಮತ್ತು ನಲವತ್ತು ಕಳ್ಳರು ಎಂಬಂತೆ ಕಾಂಗ್ರೆಸ್ ಕಳ್ಳರ ಪಟ್ಟಿ ತೆರೆದರೆ ಚೋರರ ಸಂಖ್ಯೆ ಅಸಂಖ್ಯ. ಸಾಂಕೇತಿಕವಾಗಿ ಸೋನಿಯಾ ಗಾಂಧಿ ಅವರನ್ನು ಭ್ರಷ್ಟರ ಆರಾಧ್ಯ ದೇವತೆ ಎನ್ನಬಹುದು. ಕಾಂಗ್ರೆಸ್ ಭ್ರಷ್ಟರ ಗುಂಪು, ಆ ಗುಂಪಿಗೆ ನಕಲಿ ಗಾಂಧಿ ಕುಟುಂಬಿಕರು ಯಜಮಾನರು!
ಕಾಂಗ್ರೆಸ್ ಎಂಬ ಭ್ರಷ್ಟಾಚಾರದ ಗಂಗೋತ್ರಿಯ ಪ್ರಕರಣಗಳನ್ನು ಕೆದಕಿದರೆ ಹತ್ತಾರು ಕಾದಂಬರಿ ಬರೆಯಬಹುದು.
ಕಳೆದ ದಶಕಗಳ ಕೆಲವು ಉದಾಹರಣೆಗಳ ಮೂಲಕ ದೇಶಕ್ಕೆ ಕಾಂಗ್ರೆಸ್ ಬಗೆದ ಮೋಸವನ್ನು ತೆರೆದಿಡುತ್ತೇವೆ.#ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು
— BJP Karnataka (@BJP4Karnataka) July 8, 2022
ಕಾಂಗ್ರೆಸ್ ಎಂಬ ಭ್ರಷ್ಟಾಚಾರದ ಗಂಗೋತ್ರಿಯ ಪ್ರಕರಣಗಳನ್ನು ಕೆದಕಿದರೆ ಹತ್ತಾರು ಕಾದಂಬರಿ ಬರೆಯಬಹುದು. ಕಳೆದ ದಶಕಗಳ ಕೆಲವು ಉದಾಹರಣೆಗಳ ಮೂಲಕ ದೇಶಕ್ಕೆ ಕಾಂಗ್ರೆಸ್ ಬಗೆದ ಮೋಸವನ್ನು ತೆರೆದಿಡುತ್ತೇವೆ.
√ ಆಗಸ್ಟಾ ವೆಸ್ಟ್ ಲ್ಯಾಂಡ್
√ 2ಜಿ ಸ್ಪೆಕ್ಟ್ರಮ್ ಹಂಚಿಕೆ
√ ನ್ಯಾಷನಲ್ ಹೆರಾಲ್ಡ್
√ ವಾದ್ರಾ–ಡಿಎಲ್‌ಎಫ್
ನೆಹರೂ ಕಾಲದ ಮುಂಡ್ರಾ ಹಗರಣ, ಇಂದಿರಾ ಕಾಲದ ಮಾರುತಿ ಹಗರಣಗಳ ಮೂಲಕ “ನಾವು ಭ್ರಷ್ಟಾಚಾರ ಮಾಡಲೆಂದೇ ಅಧಿಕಾರದಲ್ಲಿದ್ದೇವೆ” ಎಂಬುದನ್ನು ಕಾಂಗ್ರೆಸ್ ಸೂಚ್ಯವಾಗಿ ತಿಳಿಸಿತ್ತು!
10-ಜನಪಥ್..!ಇದು ಕಾಂಗ್ರೆಸ್ ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ!ಭ್ರಷ್ಟಾಚಾರದ ಕಪ್ಪು ಹಣ ಕೊನೆಗೆ ಸೇರುವುದು ಇದೇ ಸ್ಥಳಕ್ಕೆ ಅಲ್ಲವೇ?ಡಿಕೆಶಿ ಅವರೇ ನಿಮ್ಮ ಪಕ್ಷದ ಉಪ್ಪಿನ ಅಂಗಡಿ ಹೆಡ್ ಕ್ವಾಟ್ರರ್ಸ್ ಇದೇ ತಾನೇ ಎಂದು ಪ್ರಶ್ನಿಸಿದೆ.
10-ಜನಪಥ್..!
ಇದು ಕಾಂಗ್ರೆಸ್ ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ!
ಭ್ರಷ್ಟಾಚಾರದ ಕಪ್ಪು ಹಣ ಕೊನೆಗೆ ಸೇರುವುದು ಇದೇ ಸ್ಥಳಕ್ಕೆ ಅಲ್ಲವೇ?
ಡಿಕೆಶಿ ಅವರೇ ನಿಮ್ಮ ಪಕ್ಷದ ಉಪ್ಪಿನ ಅಂಗಡಿ ಹೆಡ್ ಕ್ವಾಟ್ರರ್ಸ್ ಇದೇ ತಾನೇ?#ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು
— BJP Karnataka (@BJP4Karnataka) July 8, 2022