ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಟ್ಟು 854 ಹುದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸಲು ಮುಂದಾಗಿದೆ.
ಕಲ್ಯಾಣ ಕರ್ನಾಟಕ ಹಾಗೂ ಉಳಿದ ಮೂಲ ವೃಂದದ ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್, ಜೂನಿಯರ್ ಹೆಲ್ತ್ ಅಸಿಸ್ಟಂಟ್ ಹಾಗೂ ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್ ಹುದ್ದೆಗಳು ಸೇರಿದಂತೆ 854 ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಿದೆ..
ಒಟ್ಟು 854 ಸ್ಥಾನಗಳಿಗೆ ಸರ್ಕಾರವು ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿ ಅಂತಿಮಗೊಳಿಸಿ, ಅಧಿಸೂಚನೆ ಪ್ರಕಟಿಸಿದೆ. ನೇರ ನೇಮಕಾತಿಗಾಗಿ ವಿಶೇಷ ಆಯ್ಕೆ ಸಮಿತಿ, ವಯಸ್ಸು ಹಾಗೂ ಶೈಕ್ಷಣಿಕ ಅರ್ಹತೆ ನಿಗದಿ, ಅರ್ಜಿ ಸಲ್ಲಿಕೆ, ಶುಲ್ಕ, ನೇಮಕಾತಿ ವಿಧಾನ ಹಾಗೂ ಪ್ರಕ್ರಿಯೆಗಳು, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಿಕೆ ಹಾಗೂ ಅಭ್ಯರ್ಥಿಗಳ ನೇಮಕಕ್ಕೆ ಪಾಲಿಸಬೇಕಾದ ನಿಯಮಗಳನ್ನು ರೂಪಿಸಿದ್ದು, ಈ ಅಧಿಸೂಚನೆಯಲ್ಲಿ ತಿಳಿಸಿದೆ.