ಹಿಜಾಬ್ ವಿವಾದ ಸುಪ್ರೀಂ ಅಂಗಳಕ್ಕೆ – ತುರ್ತು ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ
ಹೈಕೋರ್ಟ್ ಮಧ್ಯಂತರ ದೇಶಕ್ಕೆ ಅಸಮಧಾನ
ಸುಪ್ರೀಂ ಕದ ತಟ್ಟಿದ ದೂರುದಾರರು
ಕರ್ನಾಟದ ವಿದ್ಯಮಾನ ಗಮನಿಸುತ್ತಿದ್ದೇವೆ –ಸುಪ್ರೀಂ
ತುರ್ತು ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ
ಹಿಜಾಬ್ ವಿವಾದಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮದ್ಯಂತರ ಮೌಖಿಕ ಆದೇಶ ನೀಡಿದೆ. ಇದರ ವಿಚಾರಣೆ ನಡೆಯುತ್ತಿರುವಾಗಲೆ ಅಸಮಾಧನ ಗೊಂಡಿರುವ ದೂರುದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೆರಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿಜಬ್ ವಿವಾದವನ್ನ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದಾರೆ. ಇನ್ನೆರೆಡು ತಿಂಗಳಲ್ಲಿ ಪರೀಕ್ಷೆ ಇದೆ ಈ ವಿಚಾರ ಕಳ್ಗಿಚ್ಚಿನಂತೆ ಎಲ್ಲಾ ಜಿಲ್ಲೆಗಳಲ್ಲಿ ಹಬ್ಬುತ್ತಿದೆ. ಹಾಗಾಗಿ 9 ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಬೇಕು ಎಂದು ಕಪಿಲ್ ಸಿಬಲ್ ಕೆಳಿಕೊಂಡಿದ್ದಾರೆ.
ಧಾರ್ಮಿಕ ಸಂಕೇತದ ವಸ್ತ್ರಗಳನ್ನು ಪ್ರಕರಣ ಇತ್ಯರ್ಥ ಆಗುವವರೆಗೆ ಧರಿಸುವುದು ಬೇಡ ಎಂದು ಹಿಜಾಬ್ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನಿನ್ನೆ ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತ್ತು ಈ ಕುರಿತು ಸುಪ್ರೀಂ ಕೋರ್ಟ್, ಕರ್ನಾಟಕದಲ್ಲಿ ನಡೆಯುತ್ತಿರು ವಿದ್ಯಮಾನಗಳ ಕುರಿತು ಗಮನಿಸುತ್ತಿದ್ದೆವೆ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶ ಮಾಡುತ್ತೇವೆ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.