ಕೈಗಾರಿಕಾ ಘಟಕಗಳಲ್ಲಿ ಕೊರೊನಾ ಹರಡಲ್ವಾ..? – ವಾರಾಂತ್ಯದ ಲಾಕ್ ಡೌನ್ ಯಾಕಿಲ್ಲ..? 

1 min read
covid 19 and industry saakshatv

ಕೈಗಾರಿಕಾ ಘಟಕಗಳಲ್ಲಿ ಕೊರೊನಾ ಹರಡಲ್ವಾ..? – ವಾರಾಂತ್ಯದ ಲಾಕ್ ಡೌನ್ ಯಾಕಿಲ್ಲ..? 

covid 19 and industry saakshatvಬೆಂಗಳೂರು : ಕೈಗಾರಿಕಾ ಘಟಕಗಳಲ್ಲಿ ಕೊರೊನಾ ಹರಡಲ್ವಾ..? ವಾರಾಂತ್ಯದ ಲಾಕ್ ಡೌನ್ ಯಾಕಿಲ್ಲ..?  ಸದ್ಯ ಜನ ಸಾಮಾನ್ಯರಲ್ಲಿ ಕಾಡುತ್ತಿರುವ ಪ್ರಶ್ನೆ ಇದು. ಯಾಕೆಂದ್ರೆ ರಾಜ್ಯದಲ್ಲಿ ಕೊರೊನಾ ಹುಚ್ಚು ಕುದುರೆಯ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಒಂದಿಷ್ಟು ಕಠಿಣ ಕ್ರಮಗಳನ್ನು ಜಾರಿಗೆ ಮಾಡಿದೆ. ಅದರಂತೆ ಬೆಳಗ್ಗೆ ಆರರಿಂದ ರಾತ್ರಿ ಒಂಭತ್ತರವರೆಗೂ ಕೇವಲ ಅಗತ್ಯ ಸೇವೆ, ಅಂಗಡಿಗಳನ್ನ ಹೊರೆತುಪಡಿಸಿ ಇನ್ನುಳಿದಂತೆ ವಾಣಿಜ್ಯ ಅಂಗಡಿಗಳಿಗೆ ಬೀಗ ಹಾಕಿಸಿದೆ. ಶನಿವಾರ ಮತ್ತು ಭಾನುವಾರ ಭಾಗಶಃ ಲಾಕ್ ಡೌನ್ ಮಾಡಿದೆ. ಆದ್ರೆ ಕೈಗಾರಿಕಾ ವಲಯಕ್ಕೆ ಮಾತ್ರ ಯಾವುದೇ ನಿರ್ಭಂದ ತಂದಿಲ್ಲ. ಕೇವಲ ಉತ್ಪಾದನೆಯ ಮಿತಿಯನ್ನು ಕಡಿತಗೊಳಿಸಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದೆ.

ಇದೇ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಲ್ಲಾ ವಲಯಗಳನ್ನ ಭಾಗಶಃ ಸ್ಥಗಿತಗೊಳಿಸಿರುವ ಸರ್ಕಾರ ಕೈಗಾರಿಕಾ covid 19 and industry saakshatvವಲಯವನ್ಯಾಕೆ ಸ್ವತಂತ್ರ್ಯವಾಗಿ ಬಿಟ್ಟಿದೆ..? ಅಲ್ಲಿ ಕೊರೊನಾ ಹರಡಲ್ವಾ..? ಎನ್ನುತ್ತಿದ್ದಾರೆ ಜನರು. ಅಂದಹಾಗೆ ಜನ ರೀತಿ ಚರ್ಚೆ ಮಾಡಲು ಕಾರಣ ಕೂಡ ಇದೆ. ಸಾಮಾನ್ಯವಾಗಿ ಕೈಗಾರಿಕಾ ಘಟಕಗಳು ಅಂದ್ರೆ ಎರಡು ಸಾವಿರಕ್ಕಿಂತ ಕಡಿಮೆ ಕಾರ್ಮಿಕರು ಇರುವುದಿಲ್ಲ. ಎಷ್ಟೆ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಅಂದರೂ ಒಂದಲ್ಲಾ ಒಂದು ಬಾರಿ ನಿಯಮಗಳು ಗಾಳಿಗೆ ತೂರಿ ಕೆಲಸ ಮಾಡಲೇಬೇಕಾಗುತ್ತದೆ. ಕೆಲ ಕೈಗಾರಿಕಾ ಘಟಕಗಳಲ್ಲಿ ಸಾಮಾಜಿಕ ಅಂತರಕ್ಕೆ ಜಾಗವೇ ಇರುವುದಿಲ್ಲ. ಜೊತೆಗೆ ಮಾಸ್ಕ್ ಧರಿಸುವ ಕೂಡ ಅನುಮಾನವೇ. ಇನ್ನೂ ಮುಖ್ಯವಾಗಿ ಗಾರ್ಮೆಂಟ್ ಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸಕ್ಕೆ ಬರುತ್ತಾರೆ. ಅಲ್ಲಿ ಸೂಕ್ತ ವ್ಯವಸ್ಥೆ ಕೂಡ ಇರುವುದಿಲ್ಲ. ಒಂದು ವೇಳೆ ಇಲ್ಲಿ ಯಾರಿಗಾದ್ರೂ ಕೊರೊನಾ ಸೋಂಕು ದೃಢಪಟ್ಟರೇ ಕಾರ್ಮಿಕರೆಲ್ಲರೂ ಆತಂಕಕ್ಕೆ ಒಳಗಾಗುತ್ತಾರೆ. ಜೊತೆಗೆ ಒಂದಿಷ್ಟು ಮಂದಿಯನ್ನ ಪ್ರಾಥಮಿಕ ಸಂಪರ್ಕ ಅದು ಇದು ಅಂತ ಐಸೋಲೇಷನ್ ನಲ್ಲಿ ಇಡಲಾಗುತ್ತದೆ.

ಇದು ಒಂದು ಕಡೆಯಾದ್ರೆ ಇವರು ಮನೆಯಿಂದ ಕಾರ್ಖಾನೆಗೆ ಬರಬೇಕೆಂದರೆ ಕೆಲವರಿಗೆ ಕಂಪನಿಯಿಂದಲೇ ವಾಹನ ವ್ಯವಸ್ಥೆ ಇರುತ್ತದೆ. ಇನ್ನೂ ಕೆಲವರಿಗೆ ಇರುವುದಿಲ್ಲ. ಇಲ್ಲಿ ವಾಹನದ ಸೌಲಭ್ಯ ಇಲ್ಲದವರೇ ಹೆಚ್ಚಿರುತ್ತಾರೆ. ಇವರು ಸಾರಿಗೆ ಬಸ್, ಶೇರ್ ಆಟೋ, ಟಿಟಿ ವಾಹನಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿ ಕೂಡ ಅವರಿಗೆ ಕೊರೊನಾ ಸೋಂಕು ತಗುಲುವ ಹಾಗೂ ಅವರ ಮನೆಯವರೂ ಸೋಂಕಿತರಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ. ಹೀಗಿರುವಾಗ ಸರ್ಕಾರ ಕೈಗಾರಿಕಾ ವಲಯವನ್ನ ಫ್ರೀ ಬಿಟ್ಟಿದ್ದು ಯಾಕೆ..? ಸಾಮಾಜಿಕ ಅಂತರ ಕಾಯ್ದುಕೊಳ್ಳಿ , ಮನೆಯಿಂದ ಯಾರು ಆಚೆ ಬರಬೇಡಿ ಅಂತ ಹೇಳುವ ಸರ್ಕಾರ ಕೈಗಾರಿಕಾ ವಲಯದ ಬಗ್ಗೆ ಹಾಗೂ ಅದರಲ್ಲಿ ಕೆಲಸ ಮಾಡುವವರ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ ಅನ್ನೋದು ಆ ಶ್ರೀರಾಮಚಂದ್ರನಿಗೆ ತಿಳಿಯಬೇಕು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd