ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ : ಮುನಿರತ್ನ karnataka minister munirathna talks congress hike saaksha tv
ಕೋಲಾರ : ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ ಎಂದು ಸಚಿವ ಮುನಿರತ್ನ ಕಿಡಿಕಾರಿದ್ದಾರೆ.
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಇದೇ ಜನವರಿ 9 ರಂದು ಪಾದಯಾತ್ರೆ ನಡೆಸಲಿದೆ.
ಈ ಬಗ್ಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ. ಮೇಕೆದಾಟು ಯೋಜನೆ ಅದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಟಾನ ಮಾಡಿಲ್ಲ ಎಂದು ಪ್ರಶ್ನಿಸಿ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೇಕೆ ನಾಟಕ ಎಂದು ವ್ಯಂಗ್ಯವಾಡಿದರು.
ಈಗ ಪಾದಯಾತ್ರೆ ಒಂದು ರಾಜಕೀಯ ಪ್ರೇರಿತವಾಗಿದೆ. ಕಾಂಗ್ರೆಸ್ ನವರು ಖಾಲಿಯಾಗಿದ್ದಾರೆ ಕೆಲಸ ಬೇಕಾಗಿತ್ತು ಅದಕ್ಕೆ ನಾಟಕ ಶುರು ಮಾಡಿದ್ದಾರೆ.
ಮೇಕೆದಾಟು ಇವತ್ತಿನ ಸಮಸ್ಯೆ ಅಲ್ಲ ತುಂಬಾ ಹಳೆಯ ವಿಚಾರವಾಗಿದೆ. ಮುಂದೆ ಸರ್ಕಾರ ಬರಲ್ಲ ಎಂದು ಗೊತ್ತಾಗಿದೆ ಹಾಗಾಗಿ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮೇಕೆದಾಟು ಹೆಸರಲ್ಲಿ ದೊಡ್ಡ ನಾಟಕ ಮಾಡುತ್ತಿದೆ. ಇವರ ಯಾವ ಕನಸುಗಳು ಈಡೇರಲ್ಲ ಎಂದು ಹೇಳಿದ್ದಾರೆ.
ಕೊರೊನ ಸಂಕಷ್ಟದ ಮಧ್ಯೆ ಮೇಕೆದಾಟು ಪಾದಯಾತ್ರೆ ಬೇಕಿತ್ತಾ ಎಂದು ಪ್ರಶ್ನಿಸಿದ ಮುನಿರತ್ನ, ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ.
ಸರ್ಕಾರದ ನಿಯಮಗಳನ್ನ ತಪ್ಪದೆ ಎಲ್ಲರೂ ಪಾಲನೆ ಮಾಡಬೇಕು. 2 ಅಲೆಗಳನ್ನ ಯಶಸ್ವಿಯಾಗಿ ಎದುರಿಸಿರುವ ಸರ್ಕಾರ 3 ನೇ ಅಲೆಯನ್ನ ಸಹ ಯಶಸ್ವಿ ಯಾಗಿ ಎದುರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








