Karnataka Politics : ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಜೆಡಿಎಸ್ ಕಾರ್ಯಕರ್ತರು ನಿರ್ಧರಿಸುವರು : ಹೆಚ್ ಡಿಕೆ
ರಾಮನಗರ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ರಾಮನಗರದಲ್ಲಿ ಮಾತನಾಡಿದ ಅವರು ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರುಗಳು ತೀರ್ಮಾನ ಮಾಡ್ತಾರೆ. ನನ್ನ ಕಾರ್ಯಕರ್ತರು ಬಲಾಢ್ಯರಾಗಿದ್ದಾರೆ. ಇನ್ನೂ ಸಮಯವಿದೆ ಆಗ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ..
Hijab Controvercy : ಇದು ಬಿಜೆಪಿವರು ಮಾಡಿದ ರಾಜಕೀಯ : ಜಮೀರ್ ಅಹ್ಮದ್
ಇನ್ನೂ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಈಗಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇವೇಗೌಡರು ಹೇಳಿದ್ದಾರೆ. ನಾನು ಸಹ ಮೊನ್ನೆ ಎಲ್ಲೋ ಒಂದು ಕಡೆ ಹೇಳಿದ್ದೇ. ಜೆಡಿಎಸ್ ಬಿಟ್ಟು ಯಾರೇನು ಮಾಡಲಿಕ್ಕೆ ಆಗಲ್ಲ ಎಂದಿದ್ದೆ. ಹೀಗೆಂದು 123 ಸ್ಥಾನಕ್ಕಿಂತ ಕೆಳಗೆ ಇಳಿದಿದ್ದೇವೆ ಅಂತಲ್ಲ. ನನ್ನ ಗುರಿ ಇರೋದು 123 ಸ್ಥಾನ ಗಳಿಸುವುದು. ಮುಂಬರುವ ಚುನಾವಣೆಯಲ್ಲಿ ಈ ಗುರಿ ಇಟ್ಟುಕೊಂಡು ಹೊರಟಿದ್ದೇನೆ ಎಂದಿದ್ದಾರೆ…
ಇನ್ನೂ ಹದಿನಾಲ್ಕು ತಿಂಗಳ ಅವಕಾಶ ಇದೆ. ಈಗಾಗಲೇ ನಾನು ಕನ್ನಡಪರ ಸಂಘಟನೆ ಸಭೆ ಮಾಡಿದ್ದೇನೆ. ಅದೇ ರೀತಿ ರೈತರ, ದಲಿತ ಸಂಘರ್ಷ ಸಮಿತಿ, ನೀರಾವರಿ ಹೋರಾಟಗಾರನ್ನ ಸದ್ಯದಲ್ಲೇ ಭೇಟಿ ಮಾಡಲಿದ್ದೇನೆ ಎಂದಿದ್ದಾರೆ…