Karnataka sessions 2022 : ಇಂದಿನಿಂದ 2022 ನೇ ಸಾಲಿನ ರಾಜ್ಯ ಜಂಟಿ ಅಧಿವೇಶನ ಆರಂಭ : ಅಗಲಿದ ಗಣ್ಯರಿಗೆ ಸಂತಾಪ
ಇಂದಿನಿಂದ 2022 ನೇ ಸಾಲಿನ ರಾಜ್ಯ ಜಂಟಿ ಅಧಿವೇಶನ ಆರಂಭವಾಗಿದೆ…
10 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ಬಜೆಟ್ ನಡೆಯಲಿದೆ..
ಮೊದಲ ದಿನದ ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ..
ರಾಜ್ಯಪಾಲರ ಭಾಷಣ ಬಳಿಕ ವಿಧಾನಸಭೆ ಕಲಾಪ ಪುನರ್ ಆರಂಭವಾಗಿದೆ..
ವಂದೇ ಮಾತರಂ ಮೂಲಕ ಸಭೆ ಆರಂಭವಾದ ಬಳಿಕ ಇತ್ತೀಚೆಗೆ ನಿಧನರಾದವರಿಗೆ ಸಂತಾಪ ಸೂಚಿಸಲಾಗಿದೆ..
ಮಾಜಿ ಸಚಿವ ಡಾ. ಜೆ. ಅಲೆಕ್ಸಾಂಡರ್, ಎಂಎನ್ ಸಜ್ಜನ್, ಹೆಚ್.ಬಿ ಪಾಟೀಲ್, ಗಾಯಕಿ ಲತಾ ಮಂಗೇಷ್ಕರ್, ಚಂದ್ರಶೇಖರ್ ಪಾಟೀಲ್, ಇಬ್ರಾಹಿಂ ಸುತಾರ್, ನ್ಯಾಯಮೂರ್ತಿ ಮಂಜುನಾಥ್. ಅವರಿಗೆ ಸಂತಾಪ ಸೂಚಿಸಲಾಗಿದೆ..
ಆಡಳಿತ ರೂಢ – ಪ್ರತಿಪಕ್ಷಗಳ ನಾಯಕರು ಸದನದಲ್ಲಿ ಭಾಗಿಯಾಗಿದ್ದಾರೆ… ಮಲ್ಲಯುದ್ಧ ಶುರುವಾಗೋದಕ್ಕೂ ಮುನ್ನ , ನಮ್ಮನ್ನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ್ದಾರೆ…