Karnataka Session 2022 : ಮೇಕೆದಾಟು ಪಾದಯಾತ್ರೆ ತಡೆಯೋದ್ದಕ್ಕೆ ಸರ್ಕಾರ ಹುನ್ನಾರ ನಡೆಸಿತು – ಯು ಬಿ ವೆಂಕಟೇಶ್
ಜಂಟಿ ಅಧಿವೇಶದನದ 2ನೇ ದಿನದಲ್ಲಿ ಪರಿಷತ್ ನಲ್ಲಿ ಆಡಳಿತ ರೂಢ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದೆ.. ಮೇಕೆದಾಟು ಪಾದಯಾತ್ರೆ ತಡೆಯೋದ್ದಕ್ಕೆ ಸರ್ಕಾರ ಹುನ್ನಾರ ನಡೆಸಿತು ಎಂದು ಯು ಬಿ ವೆಂಕಟೇಶ್ ಆರೋಪ ಮಾಡಿದ್ದಾರೆ.. ವಿಪಕ್ಷಗಳನ್ನ ಕಟ್ಟಿ ಹಾಕ್ಕೋಕ್ಕೆ ಸರ್ಕಾರ ಹುನ್ನಾರ ನಡೆಸಿತು. ಪಾದಯಾತ್ರೆ ವೇಳೆ ಕೋವಿಡ್ ಸಂಖ್ಯೆ ಹೆಚ್ಚು ಮಾಡಿದ್ರು . ಈ ರೀತಿ ಸರ್ಕಾರ ಮಾಡಬಾರದಿತ್ತು. ಈಗ ಎಲ್ಲಿದೆ ಸ್ವಾಮಿ ಕೋವಿಡ್ ಎಂದು ಪ್ರಶ್ನೆ ಮಾಡಿದರು..
ಅಲ್ಲದೇ ಮೇಕೆದಾಟು ನಿಲ್ಲಿಸಬೇಕು ಅಂತ ಕೋವಿಡ್ ಸಂಖ್ಯೆ ಹೆಚ್ಚು ಮಾಡಿದ್ರಿ.. ಇದರಿಂದ ಕಾಂಗ್ರೆಸ್ ಗೆ ಒಳ್ಳೆಯ ಹೆಸರು ಬರುತ್ತೆ . ಹಾಗಾಗಿ ನೀವು ಇದನ್ನ ತಡೆದ್ರಿ.. ಪ್ರಧಾನಿ ಬಳಿ ಹೋಗಿ ಕ್ಲಿಯರ್ ಮಾಡಿಕೊಂಡು ಬನ್ನಿ.. ನಾವೇ ನಿಮಗೆ ಹೂ ಹಾರ ಹಾಕಿ ಸನ್ಮಾನ ಮಾಡ್ತೀವಿ. ನೀರಾವರಿ ಯೋಜನೆಗೆ ಏನ್ ಸ್ವಾಮಿ ಮಾಡಿದ್ದೀರಾ. ಯಾವ ನೀರಾವರಿ ಯೋಜನೆ ನಡೆಯುತ್ತಿದೆ ನಿಮ್ಮ ಸರ್ಕಾರದಲ್ಲಿ ಎಂದು ಸರ್ಕಾರದ ವಿರುದ್ಧ ಯುಬಿ ವೆಂಕಟೇಶ್ ಕಿಡಿ ಕಾರಿದ್ದಾರೆ…








