Karnataka | ಚಾಮುಂಡೇಶ್ವರಿ ಬಗ್ಗೆ ಸಿದ್ದರಾಮಯ್ಯಗೆ ಹಲವು ದಶಕಗಳ ದ್ವೇಷ
ಬೆಂಗಳೂರು : ಪಠ್ಯ ಪರಿಷ್ಕರಣೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಟೀಕೆ ಮುಂದುವರೆಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಅಪಮಾನ ಮಾಡಿತ್ತು.
ಸಮಾಜ ವಿಜ್ಞಾನದ 6 ನೇ ತರಗತಿ ಪಠ್ಯದಿಂದ ನಾಡದೇವತೆ ಭಾಗವನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿತ್ತು. ಸಿದ್ದರಾಮಯ್ಯನವರೇ ಆಗೇಕೆ ಮೌನಕ್ಕೆ ಶರಣಾಗಿದ್ದು ಎಂದು ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಮೈಸೂರು ಅರಸರು ಹಾಗೂ ನಾಡ ದೇವಿ ಚಾಮುಂಡೇಶ್ವರಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಹಲವು ದಶಕಗಳ ದ್ವೇಷವಿದೆ.
https://twitter.com/BJP4Karnataka/status/1540208321096843265?s=20&t=SiiUQSjL-YEWth4VvLS0rw
ನಾಡು- ನುಡಿಗೆ ಅಪಾರ ಕೊಡುಗೆ ನೀಡಿರುವ ರಾಜಮನೆತನದ ವಿರುದ್ಧ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಕೋರ್ಟ್ ಮೆಟ್ಟಿಲು ಏರಿದ್ದರು. ಪಠ್ಯದಲ್ಲೂ ಅದೇ ದ್ವೇಷವನ್ನು ಮುಂದುವರೆಸಿದ್ದೇ?
ಗಂಡಭೇರುಂಡವನ್ನು ಕರ್ನಾಟಕ ರಾಜ್ಯದ ರಾಜ ಲಾಂಛನ ಎಂದು ಇಂದಿಗೂ ಪರಿಗಣಿಸುತ್ತೇವೆ. ಅದು ಮೈಸೂರು ಒಡೆಯರ ರಾಜಲಾಂಛನವೂ ಆಗಿತ್ತು.
https://twitter.com/BJP4Karnataka/status/1540208194315685888?s=20&t=SiiUQSjL-YEWth4VvLS0rw
ಆದರೆ ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ಸಮಿತಿ ಮೈಸೂರು ಒಡೆಯರ ಜತೆಗೆ ನಂಟು ಹೊಂದಿದ್ದ ಕನ್ನಡದ ಈ ಎಲ್ಲ ಅಸ್ಮಿತೆಗಳನ್ನು ಕಿತ್ತು ಹಾಕಿದ್ದು ಸರಿಯೇ?
ಚಾಮುಂಡೇಶ್ವರಿ ದೇವಿಯ ಪಠ್ಯವನ್ನು ತೆಗೆಸಿದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು. ನಾಡದೇವತೆಯ ಶಾಪ ತಟ್ಟದೇ ಇರುತ್ತದೆಯೇ ಎಂದು ಪ್ರಶ್ನೆ ಮಾಡಿದೆ.








