ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯದ ಪ್ರಮುಖ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!

Namratha Rao by Namratha Rao
February 15, 2021
in Newsbeat, State, ರಾಜ್ಯ
weekend curfew in bangalore latest news today saaksha tv
Share on FacebookShare on TwitterShare on WhatsappShare on Telegram

ರಾಜ್ಯದ ಪ್ರಮುಖ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!

ಬಿಎಂಟಿಸಿ ಸಿಬ್ಬಂದಿಗೆ ಭರ್ಜರಿ ಸುದ್ದಿ : ಆನ್ ಲೈನ್ ಮೂಲಕ ರಜೆ

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಕೆ ಸಂಸ್ಥೆಯು ತನ್ನ ಸಿಬ್ಬಂದಿಗೆ ಭರ್ಜರಿ ಸುದ್ದಿ ನೀಡಿದೆ. ಇನ್ಮುಂದೆ ಲಿಖಿತ ರೂಪದಲ್ಲಿ ಯಾವುದೇ ರಜೆ ಅರ್ಜಿಗಳ ಸ್ವೀಕೃತಿಯನ್ನು ಸಂಸ್ಥೆ ಸ್ಥಗಿತಗೊಳಿಸಿದ್ದು, ಮೊಬೈಲ್ ಮೂಲಕ ಸಿಬ್ಬಂದಿ ರಜೆ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದೆ. ಆನ್ ಲೈನ್ ಮೂಲಕ ಸಿಬ್ಬಂದಿ ರಜೆ ಪಡೆಯುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮಾರ್ಗಸೂಚಿನಲ್ಲಿ ಸಂಸ್ಥೆವು ಆನ್ ಲೈನ್ ಎಸ್‍ಎಂಎಸ್ ಮೂಲಕ ವಾರದ ರಜೆ, ಆಯ್ಕೆ ಮಾಡಿದ ಹಬ್ಬದ ರಜೆ, ಮಂಜೂರಾತಿ ದಿನದಂದು ಕರ್ತವ್ಯ ನಿರ್ವಹಿಸಿದಲ್ಲಿ ಪರ್ಯಾಯ ರಜೆಯನ್ನು ಕರ್ತವ್ಯ ನಿರ್ವಹಿಸಿದ 30 ದಿನಗಳೊಳಗಾಗಿ ಕಡ್ಡಾಯವಾಗಿ ಪಡೆಯಬೇಕಾಗಿದೆ. ಸಾಂದರ್ಭಿಕ ರಜೆ, ಇಎಲ್, ಸಿಎಂಎಲ್ ರಜೆಗಳನ್ನು ಒಂದೇ ಬಾರಿ ಪಡೆಯಲು ಅವಕಾಶವಿಲ್ಲ. ಒಂದು ಬಾರಿಗೆ ಆರು ಸಾಂದರ್ಭಿಕ ರಜೆಗಳನ್ನು ಮಾತ್ರ ಪಡೆಯಲು ಅವಕಾಶ ಕಲ್ಪಿಸಿದೆ. ಇಎಲ್ ಮತ್ತು ಸಿಎಂಎಲ್ ರಜೆ ಪಡೆಯುವ ಸಂದರ್ಭದಲ್ಲಿ ವಾರದ ರಜೆ, ಸಿಎಲ್ ಮತ್ತು ಪರ್ಯಾಯ ರಜೆ ಪಡೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

Related posts

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

November 15, 2026
KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

ನನ್ನದೇನಿದೆ ತೆಗೆಯಿರಿ, ಬಾಂಬೆ-ಹೈದರಾಬಾದ್‌ನಲ್ಲಿ ಏನಿದೆ ಬಿಚ್ಚಿಡಬೇಕಾ? ಚಿ.ನಾ. ರಾಮು ಬರೆದ ಬಲಿತ ದಲಿತ, ತುಳಿತ ನನ್ನ ಜನ ಅನಾಥ ಪುಸ್ತಕವನ್ನು ಕಾಂಗ್ರೆಸ್ಸಿಗರು ಮೊದಲು ಓದಲಿ: 78 ವರ್ಷಗಳ ಮೀಸಲಾತಿ ಲಾಭದ ಬಗ್ಗೆ ಹೆಚ್‌ಡಿಕೆ ಪ್ರಶ್ನೆ

November 15, 2026

ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದ ಡಿಕೆಶಿ ಪುತ್ರಿ

ಬೆಂಗಳೂರು : ಪ್ರೇಮಿಗಳ ದಿನ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಖಾಸಗಿ ಹೋಟೆಲ್ ನಲ್ಲಿ ಐಶ್ವರ್ಯ ಮತ್ತು ಅಮರ್ಥ್ಯ  ಸುಬ್ರಹ್ಮಣ್ಯ ಹೆಗ್ಡೆ ವಿವಾಹ ನರವೇರಿದೆ. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಬೆಳಗ್ಗೆ 9 ರಿಂದ 9.45 ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಗಿದೆ.

ಮದುವೆಗೆ ಒಟ್ಟು 800 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ತಮ್ಮ ಮಗಳಿಗೆ ಅಮರ್ಥ್ಯ ತಾಳಿ ಕಟ್ಟುತ್ತಿದ್ದಂತೆ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಭಾವುಕರಾದ ಐಶ್ವರ್ಯ ಕೂಡ ಕಣ್ತುಂಬಿಕೊಂಡಿದ್ದಾರೆ. ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ವಜ್ರಾಭರಣಗಳನ್ನು ತೊಟ್ಟಿದ್ದ ಐಶ್ವರ್ಯ ಮದುಮಗಳಾಗಿ ಮಿಂಚುತ್ತಿದ್ದರು.

ಕಳೆದೊಂದು ವಾರದಿಂದ ಡಿಕೆ ಶಿವಕುಮಾರ್ ಮನೆಯಲ್ಲಿ ಐಶ್ವರ್ಯಾಳ ಮದುವೆ ಸಂಭ್ರಮ ಜೋರಾಗಿತ್ತು. ಮೆಹಂದಿ, ಅರಿಶಿಣ ಶಾಸ್ತ್ರ, ಸಂಗೀತ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ.

ಫೆಬ್ರವರಿ 17 ರಂದು ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ರಿಸೆಪ್ಷನ್ ನಡೆಯಲಿದೆ. ಫೆಬ್ರವರಿ 28ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೀಗರ ಊಟ ನಡೆಯಲಿದೆ.

ಕರ್ನಾಟಕದಲ್ಲೇ ಟೆಸ್ಲಾ ಕಾರು ಉತ್ಪಾದನಾ ಘಟಕ

ಬೆಂಗಳೂರು : ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಟೆಸ್ಲಾ ನಮ್ಮ ರಾಜ್ಯದಲ್ಲಿ ತನ್ನ ಉತ್ಪಾದನಾ ಘಟಕ ತೆರೆಯಲಿದೆ. ಬೆಂಗಳೂರಿನ ಸಮೀಪದ ತುಮಕೂರು ಜಿಲ್ಲೆಯಲ್ಲಿ 7725 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ತೆರೆಯಲಿದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗವಕಾಶ ಸೃಷ್ಠಿಯಾಗಲಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ಮಾಹಿತಿ ನೀಡಿದ್ದು, ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿಲಿದೆ ಎಂದು ಪ್ರಕಟಿಸಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ 2021ರ ಮೊದಲಾರ್ಧದಲ್ಲಿ ಭಾರತದ ಕಾರು ಮಾರುಕಟ್ಟೆಗೆ ಟೆಸ್ಲಾ ಕಂಪನಿಯ ಕಾರು ಬರಲಿದೆ ಎಂದು ಡಿಸೆಂಬರ್ ಕೊನೆಯಲ್ಲಿ ತಿಳಿಸಿದ್ದರು. ಈ ಹೇಳಿಕೆ ಬೆನ್ನಲ್ಲೆ ಟೆಸ್ಲಾ ಎಲ್ಲಿ ತನ್ನ ಘಟಕ ತೆರೆಯುತ್ತೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈ ಮಧ್ಯೆ ಕರ್ನಾಟಕದಲ್ಲಿ ಟೆಸ್ಲಾ ತನ್ನ ಕಂಪನಿ ತೆರೆಯಲಿದೆ ಅನ್ನೋ ಸುದ್ದಿ ಭಾರಿ ಸದ್ದು ಮಾಡಿತ್ತು. ನಮ್ಮ ರಾಜ್ಯ ಸರ್ಕಾರ ಕೂಡ ಉದ್ಯಮ ಸ್ಥಾಪನೆಗೆ ನೆರವಾಗಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿತ್ತು. ಅದರಂತೆ ಟೆಸ್ಲಾ ಕಂಪನಿಗೆ ಘಟಕ ಸ್ಥಾಪಿಸಲು ಬೆಂಗಳೂರು, ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ನೀಡುವ ಪ್ರಸ್ತಾಪ ಸಲ್ಲಿಸಿತ್ತು.

ಹಳೆಬೀಡಿನಲ್ಲಿ ಬೆಂಕಿ : ಹಲವು ವಿಗ್ರಹಗಳಿಗೆ ಹಾನಿ

ಹಾಸನ : ಹಳೆಬೀಡಿನ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಕಾರ್ಮಿಕರ ಅಚಾತುರ್ಯ ದಿಂದಾಗಿ ಹಲವು ಅತ್ಯಮೂಲ್ಯ ವಿಗ್ರಹಗಳು ವಿಗ್ರಹಗಳಿಗೆ ಹಾನಿಯಾಗಿದೆ.

ಹೊಯ್ಸಳೇಶ್ವರ ಆವರಣದಲ್ಲಿ ಸ್ಮಾರಕದ ಸುತ್ತ ಅನುಪಯುಕ್ತ ಗಿಡಗಳು ಬೆಳೆದಿದ್ದವು. ಅವುಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸುಲಭ ಮಾಡಿಕೊಳ್ಳಲು ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ವೇಳೆ ಅತ್ಯಮೂಲ್ಯ ವಿಗ್ರಹಗಳು ಸುಟ್ಟು ಮಸಿ ಹಿಡಿದು ಮೂಲ ರೂಪ ಕಳೆದುಕೊಂಡಿವೆ.

ಭಾರತೀಯ ಪುರಾತತ್ವ ಕಾರ್ಮಿಕರು ಈ ಅಚಾತುರ್ಯವನ್ನ ಎಸಗಿದ್ದಾರೆ. ಇವರು ಒಣಗಿದ್ದ ಗಿಡಗಳಿಗೆ ಬೆಂಕಿ ಇಡುತ್ತಿದ್ದಂತೆ ಧಗಧನಗೆ ಹೊತ್ತಿಕೊಂಡು ಬೆಂಕಿ ಉರಿದಿದ್ದು, ಕೆರೆ ದಂಡೆಯಲ್ಲಿದ್ದ ಹುಚ್ಚೇಶ್ವರ ಸ್ಮಾರಕದ ಬಹುಭಾಗ ಬೆಂಕಿಯಲ್ಲಿ ಸಿಲುಕಿ ಕರಕಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಮಾರ್ಚ್ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಗೆ ಡಿಸಿ, ಎಸ್ ಪಿ ನೇಮಕ

ಹೊಸಪೇಟೆ : ರಾಜ್ಯದ ಮೂವತ್ತೊಂದನೇ ಜಿಲ್ಲೆಯಾಗಿ ಉಗಮವಾಗಿರುವ ವಿಜಯನಗರ ಜಿಲ್ಲೆಗೆ ಮಾರ್ಚ್ ತಿಂಗಳಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ನೇಮಕ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ವಿಜಯನಗರ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆ ನಗರದ ಕರ್ನಾಟಕ ಗೃಹ ಮಂಡಳಿ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ಸ್ಥಳಕ್ಕೆ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕ ಗೃಹ ಮಂಡಳಿಗೆ ಸೇರಿದ್ದ 81 ಎಕರೆಯಲ್ಲಿ 40 ಎಕರೆಯನ್ನು ವಿಜಯನಗರ ಜಿಲ್ಲಾ ಕಚೇರಿಗೆ ನೀಡಲಾಗಿದೆ.

ಮೊದಲು ವಿಶೇಷ ಅಧಿಕಾರಿಗಳು ಬರಲಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಹಾವೇರಿ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

ಹಾವೇರಿ : ಶಾರ್ಟ್ ಸರ್ಕ್ಯೂಟ್ ಆಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಂದ್ರಪ್ಪ ಬೂದಿಹಳ್ಳಿ ಮತ್ತು ನಿಂಗಪ್ಪ ಬೂದಿಹಳ್ಳಿ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಮನೆಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಹಾಗೂ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದೆ.

 

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Tags: BMTCcm bsykarnatakanamma metro
ShareTweetSendShare
Join us on:

Related Posts

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್

by Shwetha
November 15, 2026
0

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ದೂರವಾಣಿ ಕದ್ದಾಲಿಕೆ ಆರೋಪವು ಈಗ ರಾಷ್ಟ್ರ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

ನನ್ನದೇನಿದೆ ತೆಗೆಯಿರಿ, ಬಾಂಬೆ-ಹೈದರಾಬಾದ್‌ನಲ್ಲಿ ಏನಿದೆ ಬಿಚ್ಚಿಡಬೇಕಾ? ಚಿ.ನಾ. ರಾಮು ಬರೆದ ಬಲಿತ ದಲಿತ, ತುಳಿತ ನನ್ನ ಜನ ಅನಾಥ ಪುಸ್ತಕವನ್ನು ಕಾಂಗ್ರೆಸ್ಸಿಗರು ಮೊದಲು ಓದಲಿ: 78 ವರ್ಷಗಳ ಮೀಸಲಾತಿ ಲಾಭದ ಬಗ್ಗೆ ಹೆಚ್‌ಡಿಕೆ ಪ್ರಶ್ನೆ

by Shwetha
November 15, 2026
0

ತುಮಕೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಲಿತ ದಲಿತ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ...

ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್! ಕೊಲೆ, ಕಿಡ್ನಾಪ್ ಆರೋಪ ತಳ್ಳಿಹಾಕಿದ D-ಬಾಸ್; ಮುಂದೇನು?

ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ, ಆಮೇಲೆ ಬೇಲ್‌ಗೆ ಅರ್ಜಿ ಹಾಕೋಣ:ದರ್ಶನ್-ಪವಿತ್ರಾಗೌಡಗೆ ಮುಳುವಾಯ್ತಾ ವಿಡಿಯೋ ಕಾನ್ಫರೆನ್ಸ್‌ನ ಆ 2 ನಿಮಿಷದ ಸಂಭಾಷಣೆ?ಸೋಮವಾರ ನ್ಯಾಯಾಧೀಶರ ಕೈ ಸೇರಲಿದೆ ರೆಕಾರ್ಡ್ ಕ್ಲಿಪ್!

by Shwetha
November 15, 2026
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ವೇಳೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಮಾಡಿಕೊಂಡಿರುವ ಎಡವಟ್ಟೊಂದು...

ಬ್ರಾಹ್ಮಣರ ಜೊತೆ ಚರ್ಚಿಸಿ ಗ್ರಹ-ನಕ್ಷತ್ರ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದೇನೆ: ರಾಮಮಂದಿರ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮಲಲ್ಲಾ ದರ್ಶನಕ್ಕೆ ಸಜ್ಜಾದ ಅಖಿಲೇಶ್ ಯಾದವ್!

ಬ್ರಾಹ್ಮಣರ ಜೊತೆ ಚರ್ಚಿಸಿ ಗ್ರಹ-ನಕ್ಷತ್ರ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದೇನೆ: ರಾಮಮಂದಿರ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮಲಲ್ಲಾ ದರ್ಶನಕ್ಕೆ ಸಜ್ಜಾದ ಅಖಿಲೇಶ್ ಯಾದವ್!

by Shwetha
November 15, 2026
0

ಲಖನೌ: ಉತ್ತರ ಪ್ರದೇಶದ ರಾಜಕೀಯದಲ್ಲಿ ಈಗ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಪವಿತ್ರ ನಗರಿ ಅಯೋಧ್ಯೆಗೆ...

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

by Shwetha
November 15, 2026
0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಅವರ ಬಲಗಾಲಿಗೆ ಗಂಭೀರ ಸ್ವರೂಪದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram