ಶಬರಿಮಲೆಗೆ ತೆರಳಿದ ಕರ್ನಾಟಕದ ವಾಹನ ಅಪಘಾತ – 3 ಸಾವು Saaksha Tv
ತಿರುವನಂತಪುರಂ: ದೇವರ ದರ್ಶನಕ್ಕೆ ತೆರಳಿದ ವಾಹವೊಂದು ಅಪಘಾತಕ್ಕಿಡಾಗಿ ಮೂವರು ಮರಣ ಹೊಂದಿರುವ ಘಟನೆ ಕೇರಳದ ಕೋಝಿಕ್ಕೋಡ್ನ ಪುರಕ್ಕಾಟ್ಟಿರಿಯಲ್ಲಿ ನಡೆದಿದೆ.
ಶಿವಣ್ಣ ಮತ್ತು ನಾಗರಾಜ ಮೃತ ದುರ್ದೈವಿಗಳು. ಕರ್ನಾಟಕ ಮೂಲದ 15 ಜನ ಭಕ್ತರು ಟಿಟಿ ವಾಹನದಲ್ಲಿ ಶಬರಿ ಮಲೆ ದೇವರ ದರ್ಶನಕ್ಕೆ ತೆರಳಿದ್ದರು. ಆಗ ಕೇರಳದ ಪುರಕ್ಕಾಟ್ಟಿರಿಯ ಪುಲದಿಕುನ್ನು ಬೈಪಾಸ್ ಬಳಿ ಟಿಪ್ಪರ್ ಲಾರಿ ಮತ್ತು ಟಿಟಿ ನಡುವೆ ಅಪಘಾತ ನಡೆದಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮರಣ ಹೊಂದಿದ್ದು 11 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರನ್ನು ಕರ್ನಾಟಕ ಮೂಲದ ಶಿವಣ್ಣ ಮತ್ತು ನಾಗರಾಜ ಎಂದು ಗುರುತಿಸಲಾಗಿದೆ. ಟಿಪ್ಪರ್ ಚಾಲಕ ಎರ್ನಾಕುಲಂ ಮೂಲದವರಾಗಿದ್ದಾರೆ.









