ವಿಜಯನಗರ: ಮೈಲಾರ ಲಿಂಗೇಶ್ವರ ಕಾರ್ಣಿಕ ಹೊರ ಬಿದ್ದಿದ್ದು, ಸಂಪಾದಿತಲೇ ಪರಾಕ್ ಎಂದು ಕಾರ್ಣಿಕ ನುಡಿಯಲಾಗಿದೆ.
ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆದಿದ್ದು, ಗೊರವಯ್ಯ ರಾಮಣ್ಣ ಅವರು “ಸಂಪಾದಿತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಕಾರ್ಣಿಕದಂತೆ ಈ ಬಾರಿ ಉತ್ತಮ ಮಳೆ, ಬೆಳೆಯಾಗಲಿದೆ. ರೈತರ ಬದುಕು ಹಸನಾಗಲಿದೆ ಎಂದು ನಂಬಲಾಗಿದೆ.
ಕುದುರೆ ಏರಿ ಬಂದ ದೇವಸ್ಥಾನದ ಪ್ರಧಾನ ಅರ್ಚಕ, ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಗೊರವಯ್ಯಗೆ ದೀಕ್ಷೆ ನೀಡಿದರು. ಗೊರವಯ್ಯ 15 ಅಡಿ ಎತ್ತರದ ಬಿಲ್ಲನ್ನು ಏರಿ “ಸಂಪಾದಿತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಗೊರವಯ್ಯನ ಕಾರ್ಣಿಕ ಕೇಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.