ಕರುನಾಡ ಕಲಿ ಜರ್ನಲ್ ಕೆ.ಎಸ್. ತಿಮ್ಮಯ್ಯ
ಜರ್ನಲ್ ಕೆ.ಎಸ್. ತಿಮ್ಮಯ್ಯ (ಕೋದಂಡೇರ ಸುಬಯ್ಯ ತಿಮ್ಮಯ್ಯ) ಭಾರತೀಯ ಸೇನೆಯ ೬ನೇ ದಂಡನಾಯಕ. ಭಾರತೀಯ ಸೇನೆಯ ಇತಿಹಾಸದಲ್ಲಿ ಎಂದು ಮರೆಯಲಾಗದ ಅಧ್ಯಾಯ ಜರನಲ್ ತಿಮ್ಮಯ್ಯ. ಇವರ ಹೆಸರು ಕೇಳಿದರೆ ಸಾಕು ಕನ್ನಡಿಗರು ಎದೆ ಉಬ್ಬಿಸಿ ಹೇಳುತ್ತಾರೆ, ಅವರು ನಮ್ಮವರು ಎಂದು. ಇವರು ಹುಟ್ಟಿದ್ದು 31 ಮಾರ್ಚ 1906ರಲ್ಲಿ ಕೊಡಗು ಜಿಲ್ಲೆಯಲ್ಲಿ (ಅಂದಿನ ಬ್ರಿಟಿಷ್ ಭಾರತದ ಮೈಸೂರು ಪ್ರಾಂತ್ಯದ ಕೊರಗನಲ್ಲಿ). ಇವರಿಗೆ ಕ್ಷಾತ್ರ ತೇಜ ಮಣ್ಣಿನಿಂದಲೆ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವರು ಸೈನಿಕ ತರಬೇತಿಯನ್ನು ಪಡೆದು, 19th ಹೈದರಾಬಾದ್ ರೆಜಿಮೆಂಟ್ ನ ಮುಖ್ಯಸ್ಥರಾಗಿದ್ದರು. ಇವರು ಬ್ರಿಟಿಷ್ ಭಾರತೀಯ ಸೇನೆಯನ್ನು 1926ರಲ್ಲಿ ಸೇರಿ, 2ನೇ ಮಹಾಯುದ್ಧದಲ್ಲಿ ಪೀಲ್ಡ್ ಮಾರ್ಷಾಲ್ ರಾದ ಮೊದಲನೆ ಮತ್ತು ಏಕೈಕ ಭಾರತೀಯ ಅಧಿಕಾರಿ. ಇವರ ಯುದ್ಧ ನೈಪುಣ್ಯತೆ ಮತ್ತು ಧೀರತನ ಕಂಡು ಬ್ರಿಟಿಷ್ ಸೇನೆ ಹಾಡಿ ಹೊಗಳಿತ್ತು. ಮತ್ತು ಇವರಿಗೆ Burma Star ಪ್ರಶಸ್ತಿ ನೀಡಿ ಗೌರವಿಸಿತ್ತು. ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಇವರು Second Lieutenant, Lieutenant, Colonel ಇನ್ನೂ ಹಲವು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರು.
1947ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ದೇಶ ವಿಭಜನೆಯಾದಾ ನಂತರ ಭಾರತೀಯ ಸೇನೆಯಲ್ಲಿ ಇವರು Lieutenant General, General ಆಗಿ ಸೇವೆ ಸಲ್ಲಿಸಿದರು. ದೇಶ ವಿಭಜನೆ ನಂತರ ಭಾರತೀಯ ಸೇನೆಯಲ್ಲಿ ಸೈನಿಕರು ತಮ್ಮ ಸಮಚಿತ್ತವನ್ನು ಕಳೆದುಕೊಂಡು ಕಂಗಾಲಾಗಿದ್ದಾಗ, ಸೈನ್ಯದಲ್ಲಿದ್ದ ಹಿಂದೂ ಮತ್ತು ಮುಸ್ಲಿಂ ಯೋಧರೆಲ್ಲರನ್ನೂ ಒಂದೇ ನೇರಕ್ಕೆ ನೋಡಿ, ಅವರನ್ನು ಪ್ರೀತಿಸಿ ಅವರಿಂದಲೇ ಭಾರತದ ರಕ್ಷಣೆ ಮಾಡಿಸಿದ ದಕ್ಷತೆ ಜನರಲ್ ಟಿಮ್ಮಿಯವರಿಗೆ ಸಲ್ಲುತ್ತದೆ. ಸೈನ್ಯದಲ್ಲಿ ಇವರಿಗೆ ಟಿಮ್ಮಿ ಎಂದು ಪ್ರೀಯಿಂದ ಕರೆಯುತ್ತಿದ್ದರು.
19ನೇ ಇನ್ಪೆಂಟ್ರಿ ವಿಭಾಗದ ಮುಖ್ಯಸ್ಥರಾಗಿದ್ದ ಇವರು, 1948 ರಲ್ಲಿ ಪಾಕಿಸ್ತಾನ ಸೇನೆ ಕಾಶ್ಮೀರಿ ಕಣಿವೆಯ ೧೨ಸಾವಿರ ಅಡಿ ಎತ್ತರವಾದ ಜೋಜಿಲ್ಲಾ ಪಾಸ್ ತಪ್ಪಲಿನಲ್ಲಿ ಅಡುಗಿಕುಳತಿತ್ತು. ಆಗ ತಿಮ್ಮಯ್ಯ ಅವರು ೧೨ಸಾವಿರ ಅಡಿ ಎತ್ತರವಾದ ಜೋಜಿಲ್ಲಾ ಪಾಸ್ ಮೇಲೆ ಯುದ್ದ ಟ್ಯಾಂಕರ್ ತೆಗೆದುಕೊಂಡ ಹೋಗಿ ಪಾಕಿಸ್ತಾನಿಯರನ್ನ ಬಡೆದು ಓಡಿಸುತ್ತಾರೆ. ಆಶ್ಚರ್ಯಕರ ಸಂಗತಿ ಎಂದರೆ 12ಸಾವಿರ ಎತ್ತರದಲ್ಲಿ ಯುದ್ದ ಟ್ಯಾಂಕರ್ ಬಳಸಿದ ಮೊದಲ ಸೇನಾಧಿಕಾರಿ ಎಂಬ ಕೀರ್ತಿಗೆ ಪಾತ್ರರಾದರು. ಇದಾದ ನಂತರ ಅಂದಿನ ಪ್ರಧಾನ ಮಂತ್ರಿಗಳಿಗೆ ಹೇಳುತ್ತಾರೆ ನಮಗೆ 3ತಿಂಗಳು ಸಮಯವಕಾಶ ಕೊಡಿ ನಾವು ಪಾಕಿಸ್ತಾನಿ ಸೇನೆಯನ್ನು ಮುಜಾಫರಾಬಾದವರೆಗು ಅಟ್ಟಿಬಿಡ್ತಿವಿ ಎಂದು.
ಇವರು 1953-54ರಲ್ಲಿ ಕೋರಿಯಾ ಯುದ್ಧ ನಡೆದಾಗ ಅಂತರರಾಷ್ಟ್ರೀಯ ಆಯೋಗದ ಕರೆಯ ಮೇರೆಗೆ ತೆರೆಳಿದರು ಅಲ್ಲಿಯು ಕೂಡ ಹೆಸರು ಮಾಡಿದರು. ಈ ಟಿಮ್ಮಿ ತಮ್ಮ 25ವರ್ಷದ ಸುದೀರ್ಘ ಸೇವೆಯಲ್ಲಿ ಒಬ್ಬೆ ಒಬ್ಬ ಸೈನಿಕ ಇವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದು ನಾನು ಕೇಳಿಸಿಕೊಂಡಿಲ್ಲ, ಎಂದು ಬ್ರಿಗೇಡಿಯರ್ ಜಾನ್. ಪಿ. ದಳವಿ ತಮ್ಮ ಹಿಮಾಲಯನ್ ಬ್ಲಂಡರ್ ಪುಸ್ತಕದಲ್ಲಿ ತಿಳಿಸಿದ್ದಾರೆ. ಇವರು 1961ರಲ್ಲಿ ತಮ್ಮ ನಿವೃತ್ತಿಯ ಕೊನೆಯ ಭಾಷಣದಲ್ಲಿ ಸೈನಿಕರಿಗೆ “ನಿಮ್ಮನ್ನು ಚೀನಿಯ ಫಿರಂಗಿಗಳಿಗೆ ಆಹಾರವಾಗಿ ಬಿಟ್ಟು ಹೋಗುತ್ತಿಲ್ಲವೆಂದು ನಂಬಿಕೊಂಡಿದ್ದೇನೆ. ದೇವರು ಒಳ್ಳೆಯದು ಮಾಡಲಿ” ಎಂದರು. ಕೊನೆ ದಿನಗಳಲ್ಲಿ 1965ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಸೈಪ್ರಸ್ ಯುದ್ಧ ಭೂಮಿಗೆ ಸಂಯುಕ್ತ ಸಂಸ್ಥೆಯ ಪಡೆಯ ಮುಖ್ಯಸ್ಥನನ್ನಾಗಿ ನೇಮಿಸಿ ಕಳಸಿತು. ಈ ಮಹಾಯೋಧ ಅದೆ ಭೂಮಿಯಲ್ಲಿ 17 ಡಿಸೆಂಬರ್ 1965ರಂದು ಅಮರರಾದರು.
ಕೆ. ಎಸ್. ತಿಮ್ಮಯ್ಯ
ಕೊಡಗಿನ ಕಲಿ ತಿಮ್ಮಯ್ಯ, ಶತೃಗಳ ಪಾಲಿನ ಜವರಾಯ
ಭಾರತೀಯ ಸೇನೆಯ ಕಳಸಪ್ರಾಯ, ಇವರೆ ನಮ್ಮ ಆದರ್ಶಪ್ರಾಯ