Kashi : ಮೋಕ್ಷಕ್ಕಾಗಿ ಕಾಶಿಗೆ ಬಂದು ಕೊನೆಯುಸಿರೆಳೆದ ಉಕ್ರೇನ್ ಪ್ರಜೆ…
ಉಕ್ರೇನ್ ಮೇಲೆ ರಷ್ಯಾ ದಾಳಿ ನಂತರ ಅಲ್ಲಿನ ಪರಿಸ್ಥಿತಿ ಹೇಳತೀರದ್ದಾಗಿದೆ…
ಎಷ್ಟೋ ಜನರು ಜೀವ ಕಳೆದುಕೊಂಡ್ರೆ ಇನ್ನೆಷ್ಟೋ ಜನರು ಪರಿವಾರದವರನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.. ಇಂತವರ ಪೈಕಿಯೇ ಓರ್ವ ವ್ಯಕ್ತ ತನ್ನಿಡೀ ಕುಟುಂಬವನ್ನ ಈ ಯುದ್ಧದಲ್ಲಿ ಕಳೆದುಕೊಂಡಿದ್ದು ಈತ ಮೋಕ್ಷಕ್ಕಾಗಿ ಕಾಶಿಗೆ ಬಂದು ಮೃತಪಟ್ಟಿದ್ದಾನೆ.
ಹೌದು..!!!
ಈತ ಉತ್ತರಪ್ರದೇಶ ವಾರಣಾಸಿಯ ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರದ್ ಘಾಟ್ ಪ್ರದೇಶದ ಅತಿಥಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ..
ಉಕ್ರೇನ್ ಪ್ರಜೆ ಕೋಸ್ಟಿಯಾಟಿನ್ ಬೆಲಿಯಾಯೆವ್ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈತ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅನೇಕ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೋಸ್ಟಿಯಾಟಿನ್ ಖಿನ್ನತೆಗೆ ಒಳಗಾಗಿದ್ದು , ಕಾಶಿಯಲ್ಲಿ ಮೋಕ್ಷ ಸಿಗುತ್ತದೆ ಎಂದು ನಂಬಿದ್ದರು.. ಹೀಗಾಗಿ ಇಲ್ಲಿಗೆ ಬಂದು ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ..
ಕೋಸ್ಟಿಯಾಟಿನ್ ನವೆಂಬರ್ 29ರಿಂದ ನಾರದ್ ಘಾಟ್ ನಲ್ಲಿರುವ ಮುನ್ನಾ ಗೆಸ್ಟ್‌ಹೌಸ್ ನಲ್ಲಿ ಉಳಿದುಕೊಂಡಿದ್ದರು. ಆದರೆ ಭಾನುವಾರ ಸಸಾರಾಮ್ ಹೋಗಬೇಕಿತ್ತು. ಆದರೆ ಅವರು ಹೋಗಿರಲಿಲ್ಲ. ಇದರಿಂದ ಹೋಟೆಲ್ ಸಿಬ್ಬಂದಿ ಈ ಬಗ್ಗೆ ಪ್ರಶ್ನಿಸಲು ಹೋದಾಗ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು.
ಎಷ್ಟೇ ಪ್ರಯತ್ನಿಸಿದರೂ ಒಳಗಡೆಯಿಂದ ಪ್ರತಿಕ್ರಿಯೆ ಬಾರದ್ದನ್ನು ಗಮನಿಸಿದ ಹೊಟೆಲ್ ಸಿಬ್ಬಂದಿ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಸೀಲಿಂಗ್ ರಾಡ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತು ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ.