ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್ ಮೃತದೇಹಕ್ಕೆ ಪಾಕ್ ಧ್ವಜ ಹೊದಿಕೆ – ಕುಟುಂಬದ ವಿರುದ್ಧ FIR
ಜಮ್ಮು ಕಾಶ್ಮೀರ : ಭಾರತದ ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿ ಗಿಲಾನಿ ಇತ್ತೀಚೆಗೆ ಸಾವನಪ್ಪಿದ್ದು, ಅವರ ಮೃತದೇಹಕ್ಕೆ ಪಾಕಿಸ್ತಾನದ ಧ್ವಜ ಹೊದಿಸಿ ದೇಶ ವಿರೋಧಿ ಘೋಷಣೆ ಕೂಗಲಾಗಿದೆ. ಈ ಹಿನ್ನೆಲೆ ಗಿಲಾನಿ ಕುಟುಂಬಸ್ಥರ ವಿರುದ್ಧ ಬದ್ಗಾಂ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.. ಗಿಲಾನಿ ಕುಟುಂಬಸ್ಥರ ದೇಶ ದ್ರೋಹಿ ನಡೆ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಅಲಿ ಗೀಲಾನಿ ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ 92 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತ ದೇಹವನ್ನು ಸಮೀಪದಲ್ಲಿರು ಮಸೀದಿಯ ಸ್ಮಶಾನದಲ್ಲಿ ಹೂಳುವ ಮುನ್ನ ಪಾಕಿಸ್ತಾನ ರಾಷ್ಟ್ರ ಧ್ವಜವನ್ನು ಹೊದಿಸಲಾಗಿತ್ತು.
ಶಕ್ತಿಯಿಂದ ಸಾಧಿಸಲಾಗದ್ದನ್ನ ಯುಕ್ತಿಯಿಂದ ಸಾಧಿಸಬಲ್ಲದು ಎಂಬುದನ್ನ ತೋರಿಸಿಕೊಟ್ಟಿದ್ದ ಆಚಾರ್ಯ ಚಾಣಕ್ಯ..!
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾಶ್ಮೀರದಲ್ಲಿ ಶುಕ್ರವಾರ ರಾತ್ರಿ ಗಲಾಟೆ , ಘರ್ಷಣೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಇಂಟರ್‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರು. ಗಿಲಾನಿ ಪುತ್ರ ನಸೀಮ್ ಗಿಲಾನಿ ನಮ್ಮ ತಂದೆಯ ಮೃತ ದೇಹವನ್ನು ಪೊಲೀಸರು ಬಲವಂತವಾಗಿ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೇ ಮನೆಯ ಮಹಿಳೆಯರಿಗೆ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಸೈಯದ್ ಅಲಿ ಶಾ ಗೀಲಾನಿಯವರ ಅಂತ್ಯ ಕ್ರಿಯೆ ನಡೆಸಲು ಕುಟುಂಬಸ್ಥರಿಗೆ ಸಹಾಯ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.