ದಾಖಲೆಯ ಪ್ರವಾಸಿಗರ ಆಗಮನಕ್ಕೆ ಸಾಕ್ಷಿಯಾದ ಕಣಿವೆ ನಾಡು ಕಾಶ್ಮೀರ

1 min read

ದಾಖಲೆಯ ಪ್ರವಾಸಿಗರ ಆಗಮನಕ್ಕೆ ಸಾಕ್ಷಿಯಾದ ಕಣಿವೆ ನಾಡು ಕಾಶ್ಮೀರ

ಈ ಬಾರಿಯ ಬೇಸಿಗೆಯಲ್ಲಿ ಕಾಶ್ಮೀರದ ಕಣಿವೆಯು ಅತಿ ಹೆಚ್ಚು ಪ್ರವಾಸಿಗರ ಆಗಮನಕ್ಕೆ ಸಾಕ್ಷಿಯಾಗಿದೆ. ಶ್ರೀನಗರ ವಿಮಾನ ನಿಲ್ದಾಣವು ಪ್ರಯಾಣಿಕರನ್ನು ನಿಭಾಯಿಸುವ ಈ ಹಿಂದಿನ ದಾಖಲೆಗಳನ್ನ ಅಳಿಸಿ ಹಾಕಿದೆ.

ವಿಮಾನ ನಿಲ್ದಾಣವು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ನಿಭಾಯಿಸುತ್ತಿದೆ. ದಿನಕ್ಕೆ 7000 ಕ್ಕಿಂತ ಕಡಿಮೆ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯದ ನಿಲ್ದಾಣವು, 9823 ಪ್ರಯಾಣಿಕರನ್ನು ಹೊತ್ತ ಐವತ್ತೆಂಟು ವಿಮಾನಗಳು ನಿನ್ನೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಿದವು, ಕಳೆದ ಕೆಲವು ದಿನಗಳಿಂದ ಶ್ರೀನಗರಕ್ಕೆ ವಿಮಾನ ಮತ್ತು ರಸ್ತೆಯ ಮೂಲಕ ದಾಖಲೆ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶ್ರೀನಗರ, ಗುಲ್ಮಾರ್ಗ್, ಪಹಲ್ಗಾಮ್ ಮತ್ತು ಇತರ ಪ್ರವಾಸಿ ತಾಣಗಳಲ್ಲಿನ ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಹೌಸ್‌ಬೋಟ್‌ಗಳ ರೂಮ್ ಗಳು ಸಂಪೂರ್ಣ ಭರ್ತಿಯಾಗಿವೆ.

ಮಾರ್ಚ್ ತಿಂಗಳಲ್ಲಿ 1.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಬೇಟಿ ನೀಡಿದ್ದಾರೆ. ಜಮ್ಮುವಿನ ಮಾತಾ ವೈಷ್ಣೋ ದೇವಿ ದೇಗುಲವು ಚೈತ್ರ ನವರಾತ್ರಿಯ ಸಮಯದಲ್ಲಿ ಯಾತ್ರಾರ್ಥಿಗಳ ದಾಖಲೆಯ ಬೇಟಿಗೆ ಸಾಕ್ಷಿಯಾಗಿದೆ.

ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಉತ್ಕರ್ಷಕ್ಕೆ ಸಾಕ್ಷಿಯಾಗುತ್ತಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ಸರ್ಕಾರ ನಿರೀಕ್ಷಿಸುತ್ತದೆ ಎಂದು ತಿಳಿಸಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd