ಮದುವೆ ಖುಷಿ ನಡುವೆ ಕತ್ರೀನಾ – ವಿಕ್ಕಿ ವಿರುದ್ಧ ದಾರು ದಾಖಲು : ಕಾರಣವೇನು..?
ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗ್ತಿರುವ ಬಾಲಿವುಡ್ ನ ಸ್ಟಾರ್ ನಟಿ ಕತ್ರೀನಾ ಕೈಫ್ ಹಾಗೂ ವಿಕ್ಕಿಕೌಶಲ್ ಗೆ ಇದೀಗ ಸಂಕಷ್ಟ ಒಂದು ಎದುರಾಗಿದೆ.. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯು ರಾಜಸ್ಥಾನದ ಸವಾಯಿ ಮಾಧೋಪುರ್‌ನ ಭರ್ವರಾ ಅರಮನೆಯಲ್ಲಿ ನಡೆಯಲಿದೆ. ಡಿಸೆಂಬರ್ 06 ರಿಂದ 9 ರವರೆಗೆ ವಿವಾಹ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಭಾರಿ ತಯಾರಿಗಳನ್ನು ಮಾಡಲಾಗಿದೆ. ಆದ್ರೆ ಈ ಜೋಡಿ ವಿರುದ್ಧ ಇದೀಗ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.. ಹೌದು ನೇತ್ರಬಿಂದ್ ಸಿಂಗ್ ಜಾದೋನ್ ಹೆಸರಿನ ವಕೀಲರೊಬ್ಬರು ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್ ವಿರುದ್ಧ ದೂರು ದಾಖಲಿಸಿದ್ದಾರೆ.
“ದೃಶ್ಯ 2” ಗೆ ಸಿಕ್ತು ಯು\ಎ ಪ್ರಮಾಣ ಪತ್ರ
ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಭರ್ವರಾ ಅರಮನೆಯ ಸಮೀಪದ ನಿವಾಸಿಗಳಿಗೆ ಸಮಸ್ಯೆ ತಲೆದೋರಿದೆ. ವಿವಿಐಪಿಗಳು ವಿವಾಹಕ್ಕೆ ಆಗಮಿಸುವ ಕಾರಣದಿಂದಾಗಿ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ಸ್ಥಳೀಯರಿಗೆ ಓಡಾಡಲು ಅನಾನುಕೂಲವಾಗಿದೆ. ಇದೇ ವಿಷಯವಾಗಿ ವಕೀಲ ನೇತ್ರಬಿಂದ್ ಸಿಂಗ್ ಜಾದೋನ್ ನ್ಯಾಯಾಲಯದಲ್ಲಿ ಅರ್ಜಿ ಹೂಡಿದ್ದು, ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಚೌಹಾಟ್ ಮಠ ದೇವಾಲಯದ ರಸ್ತೆಯನ್ನು ಮುಚ್ಚಲಾಗಿದ್ದು, ಇದರಿಂದ ಭಕ್ತಾದಿಗಳು ತೊಂದರೆ ಪಡುತ್ತಿದ್ದಾರೆ. ನನಗೆ ತಾರಾ ಜೋಡಿಯ ವಿವಾಹದ ಬಗ್ಗೆ ಬೇಸರವಿಲ್ಲ ಆದರೆ ದೇವಾಲಯದ ರಸ್ತೆಯನ್ನು ಬಂದ್ ಮಾಡಿರುವುದು ಭಕ್ತಾದಿಗಳಿಗೆ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದಾರೆ.
ಆರ್.ಕೆ ನಿರ್ದೇಶನದಲ್ಲಿ “ಕಾಣಿಯಾಗಿದ್ದಾಳೆ” ಹುಡುಕಿ ಕೊಟ್ಟವರಿಗೆ ಬಹುಮಾನ..!
ಶತಮಾನದಷ್ಟು ಹಳೆಯ ಇತಿಹಾಸವಿರುವ ಚೌಹಾತ್ ಮಠ ದೇವಾಲಯಕ್ಕೆ ನಿತ್ಯ ಸಾವಿರಾರು ಭಕ್ತಾಧಿಗಳು ಭೇಟಿ ನೀಡ್ತಾರೆ.. ಆದ್ರೆ ಕೌಶಲ್ ಹಾಗೂ ಕತ್ರಿನಾ ವಿವಾಹ ನಡೆಯುತ್ತಿರುವ ಸಿಕ್ಸ್ ಸೆನ್ಸ್ ಹೋಟೆಲ್ ಕೂಡ ಇದೇ ದೇವಾಲಯದ ರಸ್ತೆಯಲ್ಲಿರೋದ್ರಿಂದ ಈ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದ್ರಿಂದ ಭಕ್ತರಿಗೆ ಸಮಸ್ಯೆ ಆಗಿದೆ ಎಂಬುದು ವಕೀಲರ ಆರೋಪ. ಅಂದ್ಹಾಗೆ ಡಿಸೆಂಬರ್ 06 ರಿಂದ ಶುರುವಾಗಿರುವ ಮದುವೆ ಸಮಾರಂಭ ಡಿಸೆಂಬರ್ 09ರ ವರೆಗೆ ನಡೆಯಲಿದೆ. ಬಾಲಿವುಡ್ ನ ಬಿಗ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಲಿದ್ದಾರೆ.








