ಕತ್ರಿನಾ-ವಿಕ್ಕಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ Katrina saaksha tv
ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಈಗ ಬಾಲಿವುಡ್‌ನಲ್ಲಿ ಟಾಕ್ ಆಫ್ ಟೌನ್ ಆಗಿದೆ.
ಕೆಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9 ರಂದು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇವರ ವಿವಾಹ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಬರ್ವಾರದ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ನಡೆಯಿತು.
ಸದ್ಯ ಕತ್ರಿನಾ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮದುವೆ ಆಗುವವರೆಗೂ ವಿವಾಹ ಸಂಗತಿಯನ್ನ ಗೌಪ್ಯವಾಗಿಟ್ಟಿದ್ದ ಈ ಜೋಡಿ, ಮದುವೆಯ ನಂತರದ ಬ್ಯಾಕ್ ಟು ಬ್ಯಾಕ್ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ
ಸದ್ಯ ವಿಕ್ಕಿ ಮತ್ತು ಕತ್ರಿನಾ -ವೆಡ್ಡಿಂಗ್ ಫೋಟೋಶೂಟ್‌ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗಳಲ್ಲಿ ಸೆಲೆಬ್ರಿಟಿ ಡಿಸೈನರ್ ವಿನ್ಯಾಸಗೊಳಿಸಿರುವ ಉಡುಪಿನಲ್ಲಿ ಕತ್ರಿನಾ ವಿಕ್ಕಿ ಮಿಂಚಿದ್ದಾರೆ.
ಇಬ್ಬರೂ ಬೇಬಿ ಪಿಂಕ್ ಕಲರ್ ಮ್ಯಾಚಿಂಗ್ ಕಾಸ್ಟೂಮ್ಸ್ ನೊಂದಿಗೆ ಫರ್ಪೆಕ್ಟ್ ಜೋಡಿಯಾಗಿ ಮಿನುಗುತ್ತಿದ್ದಾರೆ.
ಒಬ್ಬರ ಕೈ ಒಬ್ಬರು ಹಿಡಿದುಕೊಂಡಿರುವುದು, ಕತ್ರಿನಾ ಹಣೆಯ ಮೇಲೆ ವಿಕ್ಕಿ ಮುತ್ತಿಡುತ್ತಿರುವ ಫೋಟೋಗಳು ತುಂಬಾ ರೋಮ್ಯಾಟಿಂಗ್ ಆಗಿ ಕಾಣುತ್ತಿವೆ.
ಈ ಇಬ್ಬರು ಫೋಟೋಗಳನ್ನು ಶೇರ್ ಮಾಡುತ್ತಾ… ಸುಂದರವಾದ ಶಿರ್ಷಿಕೆ ಬರೆದಿದ್ದಾರೆ.
‘ನಮ್ಮ ಹೃದಯದಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗಿರುವ ಪ್ರೀತಿ ಮತ್ತು ಕೃತಜ್ಞತೆ ನಮ್ಮನ್ನು ಇಲ್ಲಿಯವರೆಗೆ ತಂದಿದೆ.
ನಮ್ಮ ಈ ಹೊಸ ಪಯಣದಲ್ಲಿ ಎಲ್ಲರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ”