ಧಾರವಾಡ : ಕಾವಿಧಾರಿಯ ಕಾಮದಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವ ಕಾವಿಧಾರಿಯನ್ನು ಧಾರವಾಡ ತಾಲೂಕಿನ ನವಲಗುಂದ ಗ್ರಾಮದಲ್ಲಿರುವ ಮಠದ ಪೀಠಾಧಿಪತಿ ಎಂದು ಗುರುತಿಸಲಾಗಿದೆ. ಇವರು ಒಂದು ವರ್ಷದ ಹಿಂದಷ್ಟೇ ಪೀಠವನ್ನೇರಿದ್ದರು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆ ಆಸ್ಪತ್ರೆವೊಂದರ ನರ್ಸ್ ಎಂದು ಹೇಳಲಾಗುತ್ತಿದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಮಹಿಳೆ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿರೋ ಮತ್ತೊಂದು ಮಠಾಧೀಶರೊಂದಿಗೆ ಮಾತನಾಡಿರುವ ಆಡಿಯೋ ಕೂಡ ಇದೀಗ ವೈರಲ್ ಆಗಿದೆ. ಇದು ಎರಡೂ ಮಠಗಳ ಭಕ್ತರ ಪಾಲಿಗೆ ಆತಂಕವನ್ನುಂಟು ಮಾಡಿವೆ. ಏಕೆಂದರೆ 14 ನಿಮಿಷದ ಆಡಿಯೋ ಕ್ಲಿಪ್ ನಲ್ಲಿ ಸ್ವಾಮೀಜಿಗಳು ಮದ್ಯ, ಮಾಂಸ ಸೇವನೆ ಹಾಗೂ ಕಾಮದ ವಿಚಾರವಾಗಿಯೂ ಮಾತನಾಡಿರೋದು ದಾಖಲಾಗಿದೆ. ಜೊತೆಗೆ ಆಡಿಯೋದಲ್ಲಿ ಒಟ್ಟು ಮೂವರ ಮಠಾಧೀಶರ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಇನ್ನೊಬ್ಬರು ಯಾರು ಅನ್ನೋದು ಕುತೂಹಲ ಹುಟ್ಟಿಸಿದೆ.








