ಕೇದಾರನಾಥ ದೇವಸ್ಥಾನದ ಬಳಿ ಭಾರಿ ಹಿಮ ಕುಸಿತ…
ಉತ್ತರಖಂಡ ಕೇದಾರನಾಥ ದೇವಾಲಯದ ಹಿಂಭಾಗದ ಬಳಿ ಹಿಮಕುಸಿತ ಸಂಭವಿಸಿದೆ. ಆದರೆ, ಇದು ಯಾವ ಪ್ರಮಾಣದಲ್ಲಿ ಸಂಭವಿಸಿದೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕೇದಾರನಾಥ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಕಳೆದ ಹತ್ತು ದಿನಗಳ ಹಿಂದೆ ಸೆಪ್ಟೆಂಬರ್ 23 ರಂದು ದೇವಾಲಯದ ಹಿಂದೆ ಸುಮಾರು 5 ಕಿಮೀ ದೂರದಲ್ಲಿರುವ ಚೌರಾಬರಿ ಗ್ಲೇಸಿಯರ್‌ನಲ್ಲಿ ಹಿಮಕುಸಿತ ಘಟಿಸಿತ್ತು. ರುದ್ರಪ್ರಯಾಗದ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಎಸ್.ರಾಜ್ವರ್ ಅವರು ಇದು ಅತ್ಯಂತ ಸಣ್ಣ ಹಿಮಪಾತವಾಗಿದೆ ಎಂದು ಹೇಳಿದ್ದಾರೆ. ಇದರಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Uttarakhand: An avalanche occurred this morning in the Himalayan region but no damage was sustained to the Kedarnath temple: Shri Badrinath-Kedarnath Temple Committee President, Ajendra Ajay
Video: ANI pic.twitter.com/tEUsnAhPom
— The Times Of India (@timesofindia) October 1, 2022
ಕೇದಾರನಾಥ ದೇಗುಲದ ಸುಮಾರು 5 ಕಿ.ಮೀ ಹಿಂಬದಿಯಲ್ಲಿರುವ ಚೌರಾಬರಿ ಹಿಮನದಿಯಲ್ಲಿ ಗುರುವಾರ ಸಂಜೆ 6:30ಕ್ಕೆ ಹಿಮಕುಸಿತ ಸಂಭವಿಸಿದೆ. ಆದರೆ, ಇದು ಅತ್ಯಂತ ಸಣ್ಣ ಪ್ರಮಾಣದ ಹಿಮಕುಸಿತವಾಗಿದೆ ಎಂದು ರುದ್ರಪ್ರಯಾಗದ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಎಸ್.ರಾಜ್ವರ್ ತಿಳಿಸಿದ್ದಾರೆ. ಈ ವಿಡಿಯೋವನ್ನ ಅಲ್ಲಿದ್ದ ಯಾತ್ರಾರ್ಥಿಗಳು ರೆಕಾರ್ಡ್ ಮಾಡಿದ್ದಾರೆ.
ಉತ್ತರಾಖಂಡದಲ್ಲಿ ಇತ್ತೀಚೆಗೆ ಭಾರೀ ಮಳೆಯಾಗಿದ್ದು, ರಾಜ್ಯದಲ್ಲಿ ಭೂಕುಸಿತದ ಘಟನೆಗಳು ವರದಿಯಾಗಿವೆ. ಗುರುವಾರ, ರುದ್ರಪ್ರಯಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 109 ಹಠಾತ್ ಭೂಕುಸಿತದಿಂದ ರಸ್ತೆ ತಡೆ ಉಂಟಾಗಿದೆ. ಇದರ ಪರಿಣಾಮವಾಗಿ ರಸ್ತೆಯಲ್ಲಿ ವಾಹನಗಳ ಉದ್ದನೆಯ ಸಾಲುಗಳು ಕಂಡುಬಂದವು.
ಈ ದೃಶ್ಯಗಳು ಜನರಿಗೆ 10 ವರ್ಷಗಳ ಹಿಂದೆ ಕೇದಾರನಾಥದಲ್ಲಿ ನಡೆದ ಪ್ರವಾಹದ ದೃಶ್ಯಗಳನ್ನ ನೆನಪಿಸಿದೆ.
Kedarnath: A massive avalanche hit the mountains behind the Kedarnath Temple in Uttarakhand on Saturday.