ಜನತೆಗೆ ಕೃತಜ್ಞತೆ ಸಲ್ಲಿಸಲು ಪಂಜಾಬ್ ಗೆ ಬಂದ ಕೇಜ್ರಿವಾಲ್ – Saaksha Tv
ಪಂಜಾಬ್ : ಪಂಜಾಬ್ ಗೆಲವಿನ ನಂತರ, ಪಂಜಾಬ್ ನಲ್ಲಿ ರೋಡ್ ಶೋ ಮೂಲಕ ಜನತೆಗೆ ಅಭಿನಂದನೆ ಸಲ್ಲಿಸಲು ಆಪ್ ಮುಂದಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಭರ್ಜರಿ ಜಯ ಗಳಿಸಿದ ನಂತರ ಸರ್ಕಾರ ರಚನೆಯ ಸಿದ್ಧತೆಯಲ್ಲಿದ್ದು, ಈಗ ಆಪ್ ಪಕ್ಷದ ಪಂಜಾಬ್ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನರಿಗೆ ಕೃತಜ್ಞತೆ ಸಲ್ಲಿಸುವ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಭಂದ ಅರವಿಂದ ಕೇಜ್ರಿವಾಲ್ ಅಮೃತಸರಕ್ಕೆ ತೆರಳಿದ್ದು, ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಭಗವಂತ್ ಮಾನ್, ನಾವು ಪಂಜಾಬ್ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಗುರು ಸಾಹಿಬ್ ಅವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.