ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಎಲ್‍ಡಿಎಫ್ ಮೇಲುಗೈ, ಬಿಜೆಪಿ ಚೇತರಿಕೆ
ತಿರುವನಂತಪುರಂ : ಕೇರಳ ರಾಜ್ಯದ ಸ್ಥಳೀಯ ಸಂಸ್ಥೆ ಚುನವಣೆ ಫಲಿತಾಂಶ ಹೊರಬಿದ್ದಿದ್ದು, ಆಡಳಿತರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಎಲ್ ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಯುಡಿಎಫ್ ಯಥಾಸ್ಥಿತಿಯಲ್ಲಿದ್ದು, ಬಿಜೆಪಿ ತುಸು ಚೇತರಿಕೆ ಕಂಡಿದೆ.
ತಿರುವನಂತರಪುರ ಪಾಲಿಕೆಯ ನೂರು ವಾರ್ಡ್ ಗಳ ಚುನಾವಣೆಯಲ್ಲಿ ಎಲ್ ಡಿಎಫ್ 51 ವಾರ್ಡ್‍ಗಳಲ್ಲಿ ಜಯಭೇರಿ ಬಾರಿಸಿದ್ದರೇ ಎನ್‍ಡಿಎ ಮೈತ್ರಿಕೂಟ 34 ವಾರ್ಡ್ ಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನುಳಿದಂತೆ ಯುಡಿಎಫ್ 10 ವಾರ್ಡ್‍ಗಳಲ್ಲಿ ಹಾಗೂ ಇತರೇ ಪಕ್ಷಗಳು ಉಳಿದ ವಾರ್ಡ್ ಗಳಲ್ಲಿ ಜಯ ದಾಖಲಿಸಿವೆ.
ದೇವರನಾಡಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂರು ಹಂತಗಳಲ್ಲಿ ನಡೆದಿದೆ. ಒಟ್ಟು 941 ಗ್ರಾಮ ಪಂಚಾಯತ್ ಸ್ಥಾನಗಳು, 152 ಬ್ಲಾಕ್ ಪಂಚಾಯತ್ ಸ್ಥಾನಗಳು, 14 ಜಿಲ್ಲಾ ಪಂಚಾಯತ್, 86 ಮುನ್ಸಿಪಾಲಿಟಿಗಳು ಹಾಗು ಆರು ಕಾರ್ಪೋರೇಶನ್‌ಗಳಿಗೆ ಮತದಾನ ನಡೆದಿತ್ತು.
ಇತ್ತೀಚಿನ ಫಲಿತಾಂಶ ಹೀಗಿದೆ..
ಗ್ರಾಮ ಪಂಚಾಯತ್-941
ಎಲ್‍ಡಿಎಫ್ -525
ಯುಡಿಎಫ್ -363
ಎನ್‍ಡಿಎ-20
ಇತರೆ-32
ಬ್ಲಾಕ್ ಪಂಚಾಯತ್-152
ಎಲ್‍ಡಿಎಫ್-108
ಯುಡಿಎಫ್-44
ಜಿಲ್ಲಾ ಪಂಚಾಯತ್-14
ಎಲ್ ಡಿಎಫ್-10
ಯುಡಿಎಫ್-4
ಮುನ್ಸಿಪಾಲಿಟಿ-86
ಎಲ್ ಡಿಎಫ್-35
ಯುಡಿಎಫ್-45
ಎನ್‍ಡಿಎ -2
ಇತರೆ -4
ಕಾರ್ಪೋರೇಶನ್- 6
ಎಲ್‍ಡಿಎಫ್-3
ಯುಡಿಎಫ್-3
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel