ಕೇರಳ – ನಿಗದಿತ ವೇಳಾಪಟ್ಟಿಯಂತೆ ಎಸ್ಎಸ್ಎಲ್ಸಿ ಮತ್ತು ಪ್ಲಸ್ ಟು ಪರೀಕ್ಷೆ
ಇತ್ತೀಚಿನ ವರದಿಗಳ ಪ್ರಕಾರ, ಕೇರಳ ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ನಡೆಯುತ್ತಿರುವ ಎಸ್ಎಸ್ಎಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಗಳನ್ನು ರದ್ದುಗೊಳಿಸುವುದು ಅಥವಾ ಮುಂದೂಡುವುದನ್ನು ತಳ್ಳಿಹಾಕಿದೆ.ದೇಶದಲ್ಲಿ ವೇಗವಾಗಿ ಏರುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡುವ ಸಿಬಿಎಸ್ಇ ಮಂಡಳಿಯ ನಿರ್ಧಾರವನ್ನು ಅನುಸರಿಸಿ ಈ ಸ್ಪಷ್ಟೀಕರಣವು ಬಂದಿದೆ.
ಈ ಹಿಂದೆ ಬಿಡುಗಡೆಯಾದ ದಿನಾಂಕದ ಪ್ರಕಾರ, ಕೇರಳ ರಾಜ್ಯ ಮಂಡಳಿ 2021 ರ ಏಪ್ರಿಲ್ 8 ರಿಂದ ಎಸ್ಎಸ್ಎಲ್ಸಿ, ಡಿಎಚ್ಎಸ್ಇ + 2 ಬೋರ್ಡ್ ಪರೀಕ್ಷೆಗಳನ್ನು ಪ್ರಾರಂಭಿಸಿತು.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಯನ್ನು ಕೇರಳ ಸರ್ಕಾರ ತಳ್ಳಿಹಾಕಿದೆ.
ಸಾಮಾನ್ಯ ಶಿಕ್ಷಣ ನಿರ್ದೇಶಕ ಜೀವನ್ ಬಾಬು ಮಾತನಾಡಿ, ಕೇರಳದ ಪರಿಸ್ಥಿತಿ ದೇಶದ ಇತರ ಕೆಲವು ರಾಜ್ಯಗಳಲ್ಲಿರುವಂತೆ ಭೀಕರವಾಗಿಲ್ಲ. ನಿಗದಿಯಾದ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಪುನರ್ವಿಮರ್ಶಿಸುವ ಅಗತ್ಯವಿಲ್ಲ. ಯೋಜಿತವಾದಂತೆ ಎಲ್ಲವೂ ಪ್ರಗತಿಯಲ್ಲಿದೆ ಮತ್ತು ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸರಿಸಿ ಪರೀಕ್ಷೆ ನಡೆಯಲಿದೆ ಎಂದು ಜೀವನ್ ಬಾಬು ತಿಳಿಸಿದರು.
ಕೇರಳದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಏಪ್ರಿಲ್ 29 ರಂದು ಮತ್ತು ಎರಡನೇ ವರ್ಷದ ಹೈಯರ್ ಸೆಕೆಂಡರಿ ಮತ್ತು ವೃತ್ತಿಪರ ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಏಪ್ರಿಲ್ 26 ರೊಳಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ` ಕೋವಿಡ್-ಪಾಸಿಟಿವ್ ವಿದ್ಯಾರ್ಥಿಗಳು ಮತ್ತು ಕ್ವಾರಂಟೈನ್ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರದಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಾವು ವಿಶೇಷ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಿದ್ದೇವೆ. ಪರೀಕ್ಷೆಗಳನ್ನು ತೆಗೆದುಕೊಳ್ಳುವ ಕೋವಿಡ್-ಪಾಸಿಟಿವ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಿನ ಏರಿಳಿತವಿಲ್ಲ ಎಂದು ಅವರು ಹೇಳಿದರು.
ಬೀಟ್ರೂಟ್ ಜ್ಯೂಸ್ ನ ಆರೋಗ್ಯ ಪ್ರಯೋಜನಗಳು#saakshatv #healthtips #Beetrootjuice https://t.co/jmBuMlUODi
— Saaksha TV (@SaakshaTv) April 13, 2021
ಅವಲಕ್ಕಿ ಪಾಯಸ#Saakshatv #cookingrecipe https://t.co/imvm5nTZ04
— Saaksha TV (@SaakshaTv) April 12, 2021
ರಾತ್ರಿ ಕಾವಲುಗಾರ ಐಐಎಂನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದ ಯಶೋಗಾಥೆ#Nightwatchman #IIM #AssistantProfessor https://t.co/zP904yyo08
— Saaksha TV (@SaakshaTv) April 13, 2021
ಹಲವು ವಿಶೇಷತೆಗಳ ಹತ್ತೂರು ಒಡೆಯನ ಪುತ್ತೂರು ಜಾತ್ರೆ#Saakshatv #Putturmahalingeshwarajatre #putturjatre #ಪುತ್ತೂರು_ಜಾತ್ರೆ https://t.co/pfexJwnQHB
— Saaksha TV (@SaakshaTv) April 16, 2021
#KeralaState #boardexam #SSLC #PlusTwoexam