6 ವರ್ಷಗಳಿಂದ ಗಂಡನ ಊಟದಲ್ಲಿ ಡ್ರಗ್ಸ್ ಬೆರೆಸಿದ ಪತ್ನಿ
ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯೊಬ್ಬರು ತನ್ನ ಪತಿಯ ಆಹಾರದಲ್ಲಿ ಡ್ರಗ್ಸ್ ಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಪತಿ ಸತೀಶ್ (38) ನೀಡಿದ ದೂರಿನ ಮೇರೆಗೆ ಆಶಾ ಸುರೇಶ್ (36) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದಂಪತಿಗಳು 2006 ರಲ್ಲಿ ವಿವಾಹವಾಗಿದ್ದರು. ಕೊಟ್ಟಾಯಂ ಜಿಲ್ಲೆಯ ಪಾಲಾದಲ್ಲಿ ವಾಸಿಸುತ್ತಿದ್ದರು. Kerala woman held for drugging husband’s food for over six years
ಕೆಲ ವರ್ಷಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಪತ್ನಿ ಆಶಾ ಪತಿ ಸತೀಶ್ ಜೊತೆ ಜಗಳವಾಡಿದ್ದಾಳೆ ಸಮಯ ಕಳೆದಂತೆ, ಸತೀಶ್ ಅವರು ಸುಸ್ತಾಗುತ್ತಿರುವಂತೆ ಭಾಸವಾಗಿದೆ. ನಂತರ ವೈದ್ಯರನ್ನು ಸಂಪರ್ಕಿಸಿದ್ದಾರೆ. ಲೋ ಶುಗರ್ ಕಾರಣವಾಗಿರಬಹುದು ಎಂದು ಡಾಕ್ಟರ್ ಸಲಹೆ ನೀಡಿದ್ದಾರೆ. ಆದರೆ ಔಷಧ ಸೇವಿಸಿದರೂ ಆರೋಗ್ಯ ಸುಧಾರಿಸಿದಂತೆ ಕಾಣಲಿಲ್ಲ..
ಸೆಪ್ಟೆಂಬರ್ 2021 ರಿಂದ ಸತೀಶ್ ಅವರು ಮನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿದರರು. ಆಗಿನಿಂದ ಅವರ ಸ್ಥಿತಿ ಸುಧಾರಿಸುವುದು ಕಂಡುಬಂದಿದೆ. ತನ್ನ ಹೆಂಡತಿಯ ಮೇಲೆ ಅನುಮಾನಗೊಂಡು, ಆಶಾ ತನ್ನ ಆಹಾರದಲ್ಲಿ ಯಾವುದಾದರೂ ಔಷಧವನ್ನು ಸೇರಿಸುತ್ತಿದ್ದಾಳೆಯೇ ಎಂದು ಕಂಡುಹಿಡಿಯಲು ಅವನು ತನ್ನ ಸ್ನೇಹಿತನ ಸಹಾಯ ಬಯಸಿದ್ದಾನೆ.
ಸ್ನೇಹಿತ ಆಶಾಳನ್ನು ಸಂಪರ್ಕಿಸಿದಾಗ, ಅವಳು ಸತೀಶ್‌ನ ಆಹಾರಕ್ಕೆ ಔಷಧವನ್ನು ಸೇರಿಸುತ್ತಿದ್ದದ್ದು ತಿಳಿದುಬಂದಿದೆ. ಅವನಿಗೆ ವಾಟ್ಸಾಪ್‌ನಲ್ಲಿ ಔಷಧಿಯ ಚಿತ್ರವನ್ನು ಕಳುಹಿಸಿದ್ದಾಳೆ. ಆ ನಂತರ, ಪತಿ ಮನೆಯೊಳಗಿನ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸ್ ತನಿಖೆಗಳು ನಡೆಯುತ್ತಿವೆ.