Keshav Maharaj | ಶಿಖರ್ ಧವನ್ ನೇತೃತ್ವದ ತಂಡ ಭಾರತದ – ಬಿ ಟೀಂ ಅಲ್ಲ
ಹಿರಿಯರ ಗೈರು ಹಾಜರಿನಲ್ಲಿ ನಮ್ಮ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಶಿಖರ್ ಧವನ್ ಸೇನೆ ಭಾರತದ ಬಿ ಟೀಮ್ ಎಂದರೆ ನಾನು ಒಪ್ಪುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಸ್ಟಾರ್ ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದ್ದಾರೆ.
ಭಾರತದ ಆಟಗಾರರಲ್ಲಿ ತುಂಬಾ ಟಾಲೆಂಟ್ ಇದೆ. ಒಂದೇ ಸಮಯದಲ್ಲಿ ಅಂತರಾಷ್ಟ್ರೀಯ ಮಟ್ಟದ ತಂಡವನ್ನು ಮೈದಾನಕ್ಕೆ ಇಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಹೊಗಲಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡದಲ್ಲಿ ಇಲ್ಲದಿದ್ದರೂ ಶಿಖರ್ ನೇತೃತ್ವದ ತಂಡ ಬಲಿಷ್ಠವಾಗಿದೆ.
ಏಕದಿನ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದಾರೆ.
ಭಾರತ ತಂಡದಲ್ಲಿ ಐಪಿಎಲ್ ಸೇರಿದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವಿರುವ ಆಟಗಾರರಿದ್ದಾರೆ.

ಸಂಜು ಸ್ಯಾಮ್ ಸನ್, ಶ್ರೇಯಸ್ ಅಯ್ಯರ್ ವಿಶ್ವಮಟ್ಟದ ಆಟಗಾರರು ಎಂದಿದ್ದಾರೆ.
ರಾಂಚಿ ವೇದಿಕೆಯಾಗಿ ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲುವು ಸಾಧಿಸಲು ಉಭಯ ತಂಡಗಳು ಸಜ್ಜಾಗಿವೆ.
ಭಾರತ ಸಂಭಾವ್ಯ ತಂಡ
ಶಿಖರ್ ಧವನ್, ಶುಭ್ ಮನ್ ಗಿಲ್, ರಜತ್ ಪಟಿದಾರ್ / ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್, ಸಂಜು ಸ್ಯಾಮ್ ಸನ್, ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್, ರವಿ ಬಿಷ್ಣೋಯಿ / ವಾಷಿಂಗ್ ಟನ್ ಸುಂದರ್, ಮೊಹ್ಮದ್ ಶಮಿ, ಅವೇಶ್ ಖಾನ್