ಟಿಪ್ಪು ಹೆಸರಿನ ಹಿಂದೆ ಹೋದರೇ ಸರ್ವನಾಶ : ಕೇಶವ ಮೂರ್ತಿ Keshava Murthy saaksha tv
ಮಂಡ್ಯ : ಟಿಪ್ಪು ಸುಲ್ತಾನ್ ಹೆಸರಿನ ಹಿಂದೆ ಯಾರು ಹೋಗ್ತಾರೋ ಅವರೆಲ್ಲಾ ಸರ್ವನಾಶ ಆಗುತ್ತಾರೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತೀಯ ಅಧ್ಯಕ್ಷ ಗೋ. ಕೇಶವ ಮೂರ್ತಿ ಹೇಳಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಆರಂಭವಾಗಿದ್ದು, ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿ ಮಯವಾಗಿದೆ. ನಗರದ ನಿಮಿಷಾಂಬಾ ದೇವಸ್ಥಾನದಿಂದ ಯಾತ್ರೆ ಆರಂಭವಾಗಿದ್ದು, ಸಾವಿರಾರು ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗಿದ್ದಾರೆ.
ಸುಮಾರು 6 ಕಿಲೋಮೀಟರ್ ಪಾದಯಾತ್ರೆ ನಡೆಯಲಿದ್ದು, ಮಾಲಾಧಾರಿಗಳು ಜೈ ಶ್ರೀರಾಮ್, ಜೈ ಹನುಮ ಎಂದು ಘೋಷಣೆ ಮೊಳಗಿಸುತ್ತಿದ್ದಾರೆ. ಇದಕ್ಕು ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಶವ ಮೂರ್ತಿ, ಮಾಲೆ ವಿಸರ್ಜಿಸಿ ಹನುಮನಲ್ಲಿ ಸಂಕಲ್ಪ ಮಾಡೋಣ. ಹನುಮಂತ ನಿನ್ನ ಜಾಗಕ್ಕೆ ನೀನು ಹೋಗಪ್ಪ. ನಿನ್ನನ್ನು ಮೂಡಲ ಬಾಗಿಲ ದಿಕ್ಕಿನಲ್ಲಿ ನೋಡುವ ಬಯಕೆ ನಮ್ಮದಾಗಿದೆ ಎಂದರು.
ಇದೇ ವೇಳೆ ಟಿಪ್ಪು ಬಗ್ಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಹಿಂದೆ ಯಾರು ಹೋಗ್ತಾರೋ ಅವರೆಲ್ಲಾ ಸರ್ವನಾಶ ಆಗುತ್ತಾರೆ. ಟಿಪ್ಪು ಕತ್ತಿ ತರಲು ಹೋದವನು ದೇಶಬಿಟ್ಟ. ಟಿಪ್ಪು ಜಯಂತಿ ಮಾಡಲು ಹೊರಟವನು ಹಾಳಾದ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.