ಪಕ್ಷಿವೀಕ್ಷಕರಿಗಾಗಿ ಕೆವಾಡಿಯಾ ಸಜ್ಜು – ಪ್ರಧಾನಿ ಮೋದಿ Kevadia birdwatcher
ಕೆವಾಡಿಯಾ, ಅಕ್ಟೋಬರ್31: ಪಕ್ಷಿವೀಕ್ಷಕರಿಗಾಗಿ ಕೆವಾಡಿಯಾ ಸಜ್ಜಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗುಜರಾತ್‌ನ ಕೆವಾಡಿಯಾಕ್ಕೆ ಭೇಟಿ ನೀಡಿದರು. ವಿಶ್ವದ ಅತಿ ಎತ್ತರದ ಪ್ರತಿಮೆ ಏಕತಾ ಪ್ರತಿಮೆಯ ಸ್ಥಳಕ್ಕೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹಲವಾರು ಹೊಸ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. Kevadia birdwatcher
ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಜೆಟ್ಟಿ ಮತ್ತು ಬೋಟಿಂಗ್ ಸೌಲಭ್ಯಗಳು ಸೇರಿದಂತೆ ಕೆವಾಡಿಯಾದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದೆ. ಏಕತಾ ಪ್ರತಿಮೆಯ ಅತಿದೊಡ್ಡ ಆಕರ್ಷಣೆಗಳಲ್ಲಿ ದೋಣಿ ಸವಾರಿಯು ಒಂದು ಎಂದು ಟ್ವೀಟ್ ಮಾಡಿದ್ದಾರೆ.
ಪ್ರವಾಸಿ ಆಕರ್ಷಣೆಯ ತಾಣವನ್ನು ಉತ್ತೇಜಿಸಿದ ಪಿಎಂ ಮೋದಿ, ಕೆವಾಡಿಯಾ ಪಕ್ಷಿವೀಕ್ಷಕರಿಗಾಗಿ ಸಜ್ಜಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೆವಾಡಿಯಾ ಒಂದು ವಿಶಿಷ್ಟವಾದ ಜಂಗಲ್ ಸಫಾರಿ ಅನುಭವ ನೀಡುತ್ತದೆ. ಇದು ಭಾರತದ ಪ್ರಾಣಿ ವೈವಿಧ್ಯತೆಯ ಮೂಲಕ ನಿಮ್ಮನ್ನು ಆಕರ್ಷಿಸುತ್ತದೆ. ಇದು ಭೇಟಿ ನೀಡಲೇ ಬೇಕಾದ ಸ್ಥಳ . ಈ ಸಂಜೆ ಜಂಗಲ್ ಸಫಾರಿ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಅಲ್ಲಿನ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಸರ್ದಾರ್ ಸರೋವರ್ ಅಣೆಕಟ್ಟು ಮತ್ತು ಕ್ಯಾಕ್ಟಸ್ ಗಾರ್ಡನ್‌ಗಾಗಿ ಡೈನಾಮಿಕ್ ಲೈಟಿಂಗ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಪ್ರಧಾನ ಮಂತ್ರಿ ಉದ್ಘಾಟಿಸಿದ ಕ್ಯಾಕ್ಟಸ್ ಗಾರ್ಡನ್ 17 ದೇಶಗಳಿಂದ 450 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಭೇದಗಳನ್ನು ಹೊಂದಿರುವ ಭವ್ಯವಾದ ವಾಸ್ತುಶಿಲ್ಪದ ಹಸಿರುಮನೆ ಆಗಿದೆ. ಇದು 25 ಎಕರೆ ಪ್ರದೇಶದಲ್ಲಿ 1.9 ಲಕ್ಷ ಕಳ್ಳಿ ಸಸ್ಯಗಳು ಸೇರಿದಂತೆ ಸುಮಾರು 6 ಲಕ್ಷ ಸಸ್ಯಗಳನ್ನು ಹೊಂದಿದೆ.
Kevadia is all set to turn into a birdwatcher’s delight. Inaugurated a state-of-the-art aviary, which is a must visit! pic.twitter.com/17ZL3lON2d
— Narendra Modi (@narendramodi) October 30, 2020
ಪ್ರಧಾನಿ ಮೋದಿ ಅವರು ಯುಎನ್‌ನ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿಯ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿದರು ಮತ್ತು ಯೂನಿಟಿ ಗ್ಲೋ ಗಾರ್ಡನ್‌ನಲ್ಲಿ ಕೆವಾಡಿಯಾ ಆ್ಯಪ್ ಅನ್ನು ಪ್ರಾರಂಭಿಸಿದರು.
ಯೂನಿಟಿ ಗ್ಲೋ ಗಾರ್ಡನ್ 3.61 ಎಕರೆ ಪ್ರದೇಶದಲ್ಲಿ ಹರಡಿರುವ ಒಂದು ಅನನ್ಯ ಥೀಮ್ ಪಾರ್ಕ್ ಆಗಿದೆ. ಇದು ರಾತ್ರಿ ಪ್ರವಾಸೋದ್ಯಮದ ಸಂತೋಷವನ್ನು ಅನುಭವಿಸಲು ಪ್ರವಾಸಿಗರನ್ನು ಸ್ವಾಗತಿಸುತ್ತದೆ.
ಕೇಂದ್ರದಿಂದ ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಹೊಸ ಯೋಜನೆ
ಇತರ ಯೋಜನೆಗಳ ನಡುವೆ ವಿಶ್ವದ ಮೊಟ್ಟಮೊದಲ ತಂತ್ರಜ್ಞಾನ ಚಾಲಿತ ಉದ್ಯಾನವನ, ಏಕ್ತಾ ಮಾಲ್, ಆರೋಗ್ಯಾ ವ್ಯಾನ್ ಅನ್ನು ಪಿಎಂ ಮೋದಿ ಉದ್ಘಾಟಿಸಿದರು.
ಅವರು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ಝೂಲಾಜಿಕಲ್ ಪಾರ್ಕ್ ಮತ್ತು ಜಿಯೋಡೆಸಿಕ್ ಏವಿಯರಿ ಡೋಮ್ ಅನ್ನು ಉದ್ಘಾಟಿಸಿದರು.
ಕೆವಾಡಿಯಾದ ಸಮಗ್ರ ಅಭಿವೃದ್ಧಿಯಡಿಯಲ್ಲಿ ಪ್ರಧಾನಿ ಮೋದಿ 17 ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಿದರು ಮತ್ತು 4 ಹೊಸ ಯೋಜನೆಗಳಿಗೆ ಅಡಿಪಾಯ ಹಾಕಿದರು.
ನ್ಯಾವಿಗೇಷನ್ ಚಾನೆಲ್, ನ್ಯೂ ಗೋರಾ ಸೇತುವೆ, ಸರ್ಕಾರಿ ಕ್ವಾರ್ಟರ್ಸ್, ಬಸ್ ಬೇ ಟರ್ಮಿನಸ್, ಏಕ್ತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, ಬುಡಕಟ್ಟು ಹೋಂ ಸ್ಟೇ ಈ ಯೋಜನೆಗಳಲ್ಲಿ ಸೇರಿವೆ.
ಇಂದು ದೇಶದ ಪ್ರಪ್ರಥಮ ಸೀಪ್ಲೇನ್ ಗೆ ಚಾಲನೆ
ದೇಶದ ಪ್ರಪ್ರಥಮ ಸೀಪ್ಲೇನ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರು ಈ ಮೂಲಕ ಗೌರವ ಸಲ್ಲಿಸಲಿದ್ದಾರೆ.
ದೇಶದ ಪ್ರಪ್ರಥಮ ಸೀಪ್ಲೇನ್ ಸ್ಟ್ಯಾಚ್ಯೂ ಆಫ್ ಯುನಿಟಿ ಸ್ಥಳದಿಂದ ಅಹಮದಾಬಾದ್ನ ಸಬರಮತಿ ನಡುವೆ ಸಂಚರಿಸಲಿದೆ. ಅವರು ಶನಿವಾರ ಸಂಜೆ ಸರ್ದಾರ್ ಸರೋವರ್ ಡ್ಯಾಮ್ ಬಳಿ ಮೂರನೇ ಸರೋವರದ ಬಳಿ ತೆರಳಲಿದ್ದು, ಅಲ್ಲಿ ಸೀಪ್ಲೇನ್ಗೆ ಚಾಲನೆ ನೀಡಲಿದ್ದಾರೆ.
ಏನಿದು ಸೀಪ್ಲೇನ್?: ನೀರಿನ ಮೇಲೆ ಟೇಕಾಫ್ ಹಾಗೂ ಲ್ಯಾಂಡಿಂಗ್ ಆಗುವಂಥ ಏರೋಪ್ಲೇನ್ ಥರದ ವಾಹನಕ್ಕೆ ಸೀಪ್ಲೇನ್ ಎನ್ನುತ್ತಾರೆ. ಸದ್ಯ ಸ್ಪೈಸ್ಜೆಟ್ ಕಂಪನಿ ಈ ಸೀಪ್ಲೇನ್ ಸರ್ವೀಸ್ ನೀಡಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಈ ಸೇವೆ ನೀಡಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ