KGF 2 : ವಾಲೆಂಟೈನ್ ಡೇ ರಾಕಿ ಭಾಯ್ ಫ್ಯಾನ್ಸ್ ಬಿಗ್ ಸರ್ಪ್ರೈಸ್….!!
ಬೆಂಗಳೂರು : ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಗಳಂತೆ ಕಾಯ್ತಿರುವ ಕೆಜಿಎಫ್ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ… ಇದೀಗ ಪ್ರೇಮಿಗಳ ದಿನಾಚರಣೆಗೆ ಕೆಜಿಎಫ್ ಪ್ರೇಮಿಗಳಿಗೆ ದೊಡ್ಡದೊಂದು ಸರ್ಪ್ರೆಸ್ ಕೊಡಲು ಮುಂದಾಗಿದೆ ಕೆಜಿಎಫ್ ತಂಡ.
ಹೌದು.. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ಸಿನಿಮಾ ಭಾರತ ಸಿನಿಮಾರಂಗದಲ್ಲೇ ಹೊಸ ಅಲೆ ಎಬ್ಬಿಸಿದೆ.. ಅಲ್ಲದೇ ಸಿನಿಮಾ ತಂಡ ಈಗಾಗಲೇ ಟೆಂಪಲ್ ರನ್ ಶುರು ಮಾಡಿದೆ..
ಇದೀಗ ಫೆಬ್ರವರಿ 14 ಅಂದ್ರೆ ವಾಲೆಂಟೈನ್ಸ್ ಡೇ ಗೆ ಸಿನಿಮಾದ ಐಟಂ ಹಾಡು ರಿಲೀಸ್ ಆಗಲಿದೆ ಎಂಬುದು ಹೊಸ ಅಪ್ ಡೇಟ್.. ಹೌದು ,, ಕೆಜಿಎಫ್ ಭಾಗ ಒಂದ್ರಲ್ಲಿ ತಮನ್ನಾ ರೆಟ್ರೋ ಸಾಂಗ್ ಜೋಕೆ ಹಾಡಿನ ರೀಮಿಕ್ಸ್ ವರ್ಷನ್ ಗೆ ಸೊಂಟ ಬಳಕಿಸಿದ್ದರು..
kgf 2 : big surprise on feb 14
ಇದೀಗ ಮತ್ತೊಂದು ರೆಟ್ರೋ ರೀಮಿಕ್ಸ್ ಸಾಂಗ್ ಇರಲಿದೆ ಎನ್ನಲಾಗ್ತಿದೆ. ಅಲ್ಲದೇ ಈ ಐಟಂ ಹಾಡಿಗೆ ಬಾಲಿವುಡ್ ನ ಡ್ಯಾನ್ಸಿಂಗ್ ದೀವಾ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ಹಾಡು ಪ್ರೇಮಿಗಳ ದಿನಕ್ಕೆ ರಿಲೀಸ್ ಆಗಲಿದೆ ಎನ್ನಲಾಗ್ತಿದೆ…
ಅಂದ್ಹಾಗೆ ಬಾಲಿವುಡ್ ನ ಸೂಪರ್ ಹಿಟ್ ಹಾಡು ‘ಮೆಹಬೂಬ ಮೆಹಬೂಬ’ದ ರೀಮಿಕ್ಸ್ ವರ್ಷನ್ ಗೆ ನೂರಾ ಫತೇಹಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ಹಾಡನ್ನು ಪ್ರೇಮಿಗಳನ್ನ ದಿನದಂದು ಬಿಡುಗಡೆ ಮಾಡಲಿದೆಯಂತೆ ಸಿನಿಮಾ ತಂಡ. ಅಂದ್ಹಾಗೆ ಈ ರೀತಿಯಾದ ಕಬರ್ ಹರಿದಾಡ್ತಿರುವುದು ಟಾಲಿವುಡ್ ಅಂಗಳದಲ್ಲಿ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ…