KGF 2 ಪಾತ್ರ ನಿಂದಿಸಿದ ತೆಲುಗು ನಿರ್ದೇಶಕ ; ಯಶ್ ಫ್ಯಾನ್ಸ್ ಕಿಡಿ…
‘ಕೇರಾಫ್ ಕಂಚರಪಾಲೆಂ’ ಸಿನಿಮಾ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ʼವೆಂಕಟೇಶ್ ಮಹಾ’ ಕೆಜಿಎಫ್ 2 ಚಿತ್ರದ ಪಾತ್ರದ ಬಗ್ಗೆ ಕೇವಲವಾಗಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವ ವೇಳೆ ವೆಂಕಟೇಶ್ ಮಹಾ ಜೊತೆಗೆ ಟಾಲಿವುಡ್ ನಿರ್ದೇಶಕರಾದ ನಂದಿನಿ ರೆಡ್ಡಿ, ಇಂದ್ರಗಂಟಿ ಮೋಹನಕೃಷ್ಣ, ಶಿವ ನಿರ್ವಾಣ ಮತ್ತು ವಿವೇಕ್ ಆತ್ರೇಯ ಕೂಡ ಭಾಗವಹಿಸಿದ್ದರು. ಈ ವೇಳೆ ಕೆಜಿಎಫ್ ಅಮ್ಮ ಮಗನ ಪಾತ್ರದ ಬಗ್ಗೆ ಮಾಡಿದ ಟೀಕೆಗೆ ತೆಲುಗು ಮತ್ತು ಕನ್ನಡದ ಯಶ್ ಫ್ಯಾನ್ಸ್ ಕಿಡಿಕಾರಿದ್ದಾರೆ.
ಇಂದಿರಮ್ಮ ಯೋಜನೆಯಡಿ ಗಣಿ ಕಾರ್ಮಿಕರಿಗೆ ಮನೆ ಕೊಟ್ಟು ಚಿನ್ನವನ್ನೆಲ್ಲ ತೆಗೆದುಕೊಂಡು ಹೋಗಿ ಸಮುದ್ರಕ್ಕೆ ಹಾಕಿದರೇ ನಾವು ಚಪ್ಪಾಳೆ ತಟುತ್ತೇವೆ ಎಂದು ಎಂದು ನಿರ್ದೇಶಕ ವೆಂಕಟೇಶ್ ಮಹಾ ಟೀಕೆ ಮಾಡಿದ್ದ. ಇದಕ್ಕೆ ಕಿಡಿಕಾರಿದ ನೆಟ್ಟಿಗರು ತಾವು ಒಬ್ಬ ನಿರ್ದೇಶಕರಾಗಿ ನಿಮಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಇನ್ನಬ್ಬ ನಿರ್ದೇಶಕರ ಪ್ರತಿಭೆಯನ್ನ ಹೀಗೆಳೆಯುವುದು ತಪ್ಪು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ಸಿನಿಮಾದ ಹೆಸರನ್ನು ಹೇಳಲಿಲ್ಲ. ಆದರೆ ಅವರು ವಿವರಿಸಿರುವ ಕಥೆಯ ಎಳೆಯನ್ನು ಕೇಳಿದರೆ ಕೆಜಿಎಫ್ 2 ಸಿನಿಮಾದ ಬಗ್ಗೆ ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ಇದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇತರ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕರು. ವೆಂಕಟೇಶ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
KGF 2 Character Slammed Telugu Director; Yash fans spark…