KGF | ಎನ್ ಎಫ್ ಟಿ ನಲ್ಲಿ ಕೆಜಿಎಫ್ 2 ಹವಾ..!

1 min read
kgf-2-nfts-get-huge-response saaksha tv

KGF | ಎನ್ ಎಫ್ ಟಿ ನಲ್ಲಿ ಕೆಜಿಎಫ್ 2 ಹವಾ..!

ಕೆಜಿಎಫ್ ಚಿತ್ರದ ಮೂಲಕ ಹೀರೋ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಈ ಸಿನಿಮಾಗೆ, ಇದರಲ್ಲಿನ ಪಾತ್ರಗಳಿಗೆ, ಪ್ರದೇಶಗಳನ್ನು ಮೀರಿ ಅಭಿಮಾನಿಗಳಿದ್ದಾರೆ.

ಹೀಗಾಗಿ ಸಿನಿಮಾದ ನಿರ್ಮಾಪಕರು ಅಭಿಮಾನಿಗಳಿಗೆ ವಿಶೇಷವಾಗಿ ನಾನ್ ಫಂಜಿಬುಲ್ ಟೋಕನ್ ಗಳು, ಕೆಜಿಎಫ್‌ವರ್ಸ್ ಗಳನ್ನು ಮುನ್ನಲೆಗೆ ತಂದಿದ್ದಾರೆ.

ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಕ್ಯಾರೆಕ್ಟರ್ ಅನ್ನು ಆಧಾರವಾಗಿಟ್ಟುಕೊಂಡು ಹತ್ತು ಸಾವಿರಕ್ಕೂ ಹೆಚ್ಚು ನಾನ್ ಫಂಜಿಬುಲ್ ಟೋಕನ್ ಗಳನ್ನು (NFT) ಬಿಡುಗಡೆ ಮಾಡಲಾಗಿದೆ..

kgf-2-nfts-get-huge-response  saaksha tv

ಕೇವಲ ಒಂದು ಗಂಟೆಯಲ್ಲಿ 500 NFT ಟೋಕನ್‌ಗಳನ್ನು ಮಾರಾಟವಾಗಿವೆ. ಇದುವರೆಗೆ ಎರಡು ಸಾವಿರಕ್ಕೂ ಹೆಚ್ಚು ಟೋಕನ್‌ಗಳು ಮಾರಾಟವಾಗಿವೆ.

ಬ್ಲಾಕ್ ಚೈನ್ ತಂತ್ರಜ್ಞಾನ ಹೆಚ್ಚಾದ ಬಳಿಕ ಸಿನಿಮಾಗಳ ಪ್ರಮೋಷನ್ ಎನ್ ಎಫ್ ಟಿಯಲ್ಲಿ ಒಂದು ಭಾಗವಾಗಿದೆ. ಅಮಿತಾಬ್ ಬಚ್ಚನ್, ರಾಮ್ ಗೋಪಾಲ್ ವರ್ಮಾ ಮುಂತಾದವರು ಈಗಾಗಲೇ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ರಾಧೇಶ್ಯಾಮ್ ಅವರ ಟ್ರೇಲರ್ ಅನ್ನು ಮೆಟಾವೇರ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪರಂಪಪರೆಯನ್ನು ಕೆಜಿಎಫ್ ನಿರ್ಮಾಪಕರು ಕೂಡ NFT ರೂಪದಲ್ಲಿ ಹೊಸ ರೀತಿಯ ಪ್ರಚಾರ ಶೂರು ಮಾಡಿದ್ದಾರೆ. kgf-2-nfts-get-huge-response

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd