ನಂಬರ್ ಗೆ ನಂಬರ್ 1 ‘ರಾಖಿ ಭಾಯ್’…!!! 2022 ರಲ್ಲಿ ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾ ಯಾವುದು ಗೊತ್ತಾ..??
ಭಾರತದಲ್ಲಿ ಸರ್ವಂ ಕೆಜಿಎಫ್ ಮಯಂ… ಎಂಬಂತಗಾಗಿದೆ. ಕನ್ನಡ ಅಭಿಮಾನಿಗಳಷ್ಟೇ ಪರ ಭಾಷಾಭಿಮಾನಿಗಳಲ್ಲು KGF 2 ದೇ ಕ್ರೇಜ್.. ಇನ್ನೂ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಈ ಸಿನಿಮಾಗಾಗಿ ಕಾಯುತ್ತಿದೆ. ಆದ್ರೆ ಇದ್ರ ಜೊತೆಗೆ ನಮ್ಮ ಕನ್ನಡದ ವಿಕ್ರಾಂತ್ ರೋಣ ಸಿನಿಮಾ ಕೂಡ ಏನ್ ಕಮ್ಮಿ ಕ್ರೇಜ್ ಹುಟ್ಟುಹಾಕಿಲ್ಲ.. ಬರೀ ಸಿನಿಮಾದ ಗ್ಲಿಂಪ್ಸ್ ಹಾಲಿವುಡ್ ರೇಂಜ್ ಗೆ ಸದ್ದು ಮಾಡ್ತಿದೆ.. ಇದ್ರ ಜೊತೆಗೆ ಜಕ್ಕಣ್ಣನ RRR , ಬಾಹುಲಿ ಪ್ರಭಾಸ್ ನಟನೆಯ ರಾಧೆ ಶ್ಯಾಮ್ , ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ಬೀಸ್ಟ್ , ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ , ಮಹೇಶ್ ಬಾಬು ಅಭಿನಯದ ಸಾರ್ಕಾರಿ ವಾರಿ ಪಾಟ , ಅಲ್ಲು ಅಭಿನಯದ ಪುಷ್ಪ 2 , ಅಪ್ಪು ಅಭಿನಯದ ಜೇಮ್ಸ್ ಸಾಕಷ್ಟು ಸಿನಿಮಾಗಳು ನಿರೀಕ್ಷೆ ಹುಟ್ಟುಹಾಕಿದ್ದು , ಸಿನಿಮಾಗಳ ಬಿಡುಗಡೆಗೆ ಭಾರತದ ಅಭಿಮಾನಿಗಳು ಕಾಯ್ತಾಯಿದ್ದಾರೆ.
ಕೊರೊನಾ ಕಾಟವಿಲ್ಲದೇ ಹೋಗಿದ್ರೆ ಈ ಸಿನಿಮಾಗಳು ಈಗಾಗಲೇ ರಿಲೀಸ್ ಆಗಿ ಮತ್ತೊಮ್ಮೆ ಬಾಲಿವುಡ್ ಮುಂದೆ ಅಬ್ಬರಿಸಬೇಕಿತ್ತು. ಆದ್ರೀಗ ಇಡೀ ಭಾರತವೇ ಕಾಯುತ್ತಿರುವ ಬಾಲಿವುಡ್ ನ ಸಿನಿಮಾಗಳು ಯಾವುವು , ಟಾಪ್ 1 ಅಲ್ಲಿರುವುದು ಯಾವ ಸಿನಿಮಾ ಎಂದು ನಡೆಸಲಾದ ಸರ್ವೆಯಲ್ಲಿ ಸಿಕ್ಕಿರುವ ಉತ್ತರವೇ KGF 2
ಹೌದು KGF ನ ಕ್ಲೈಮ್ಯಾಕ್ಸ್ ನಲ್ಲಿನ ಟ್ವಿಸ್ಟ್ ಸೀಕ್ವೆಲ್ ಬಗ್ಗೆ ಜನರು ಹೆಚ್ಚು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಪ್ರಶಾಂತ್ ನೀಲ್ ಸಾರಥ್ಯದ ಹೊಂಬಾಳೆ ಫಿಲಮ್ಸ್ ನಿರ್ಮಾಣದ ಈ ಸಿನಿಮಾದ ಚಾಪ್ಟರ್ 2 ಗಾಗಿ ಅಭಿಮಾನಿಗಳು ವರ್ಷಗಳಿಂದ ಕಾಯ್ತಿದ್ದಾರೆ. ಅದ್ರಲ್ಲೂ ಈ ಸಿನಿಮಾದ ಟೀಸರ್ ಸೃಷ್ಟಿಸಿದ ಹವಾ ಏನ್ ಕಡಿಮೆನಾ.. ಅನೇಕ ದೊಡ್ಡ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿ ವಿಶ್ವ ದಾಖಲೆ ಬರೆದಿದೆ.
ಈ ಹಿಂದೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿದ ನಂತರ ಏಪ್ರಿಲ್ 14 ಕ್ಕೆ ಹೊಸ ಡೇಟ್ ಅನೌನ್ಸ್ ಮಾಡಿದ್ದು ಇನ್ನೂ 3 ತಿಂಗಳುಗಳು ಮಾತ್ರ ಬಾಕಿ ಉಳಿದಿದೆ.. ಈ ನಡುವೆ ಇಡೀ ಭಾರತೀಯ ಸಿನಿಮಾರಂಗವೇ ಕಾಯ್ತಿರುವ ಬಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ ಎಲ್ಲಾ ಬಾಲಿವುಡ್ ಸ್ಟಾರ್ ಗಳ ಸಿನಿಮಾಗಳನ್ನ ಮೀರಿ ನಮ್ಮ ಕೆಜಿಎಫ್ 2 ಮೊದಲ ಸ್ಥಾನದಲ್ಲಿದೆ.
KGF 2 – set new record – number 1 most expected bollywood film
ಮುಂಬೈ ಮೂಲಕ ಮೀಡಿಯಾ ಕನ್ಸಲ್ಟಿಂಗ್ ಕಂಪನಿ ಓರ್ಮ್ಯಾಕ್ಸ್ ಒಂದು ಸರ್ವೆ ಮಾಡಿತ್ತು. ಈ ವರ್ಷ ಬಾಲಿವುಡ್ನ ಬಹುನಿರೀಕ್ಷೆಯ ಸಿನಿಮಾ ಯಾವುದು ಎಂಬ ಸರ್ವೆಯಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ KGF 2 ಎಂಬ ಉತ್ತರ ಸಿನಿಪ್ರಿಯರಿಂದ ಕೇಳಿಬಂದಿದೆ.. ಈ ಮೂಲಕ ಆಮಿರ್ ಖಾನ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್ ನಂತಹ ದಿಗ್ಗಜರನ್ನೇ ಸೋಲಿಸಿರುವ ರಾಖಿ ಭಾಯ್ ಹವಾ ಎಷ್ಟರ ಮಟ್ಟಿಗೆ ಇದೆ ಅನ್ನೋದು ಸಾಬೀತಾಗಿದೆ.
2022 ರ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ KGF 2 ನಂಬರ್ 1 ರ ಸ್ಥಾನದಲ್ಲಿದೆ. ಇನ್ನೂ 2ನೇ ಸ್ಥಾನದಲ್ಲಿ ರಣ್ ಬೀರ್ ಕಪೂರ್ ಸಿನಿಮಾ ಬ್ರಹ್ಮಾಸ್ತ್ರ 3ನೇ ಸ್ಥಾನದಲ್ಲಿ ಕೆಜಿಎಫ್ 2 ಗೆ ಟಕ್ಕರ್ ಕೊಡೋಕೆ ಅದೇ ದಿನ ರಿಲೀಸ್ ಆಗ್ತಿರೋ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ , 4ನೇ ಸ್ಥಾನದಲ್ಲಿ ಟ್ರೈಗರ್ ಶ್ರಾಫ್ ಅಭಿನಯದ ಹೀರೋಪಂತಿ 2 , ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು 5ನೇ ಸ್ಥಾನದಲ್ಲಿದೆ.