ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೇ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ಅಷ್ಟೇ ಯಾಕೆ ಇಡೀ ವಿಶ್ವಾದ್ಯಂತ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ಚಿತ್ರ ಅಂದ್ರೆ ಅದು KGF.
KGF ಚಿತ್ರ ರಿಲೀಸ್ ಆದ ನಂತರ ಕನ್ನಡ ಚಿತ್ರರಂಗದ ಖದರೇ ಬದಲಾಗಿಬಿಟ್ಟಿತ್ತು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಫ್ಯಾನ್ ಇಂಡಿಯಾ ಲೆವಲ್ ಅಲ್ಲಿ ಸದ್ದು ಮಾಡಿತ್ತು.
ಕೆಜಿಎಫ್ ಚಿತ್ರದ ಚಾಪ್ಟರ್ 2 ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಆದರೆ ಕೊರೊನಾದಿಂದ ಲಾಕ್ ಡೌನ್ ಆದ ಪರಿಣಾಮ ಶೂಟಿಂಗ್ ತಡವಾಗಿ ಚಿತ್ರದ ರಿಲೀಸ್ ಅವಧಿ ಸಹ ಮುಂದಕ್ಕೆ ಹೋಗಿದೆ.
ಇನ್ನೂ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತೆ ಎಂದು ಕಾಯುತ್ತಿದ್ದಾರೆ ಯಶ್ ಅಭಿಮಾನಿಗಳು.
ಇದೀಗ ಕೆಜಿಎಫ್ 2 ಚಿತ್ರದ ಟೀಸರ್ ರಿಲೀಸ್ ಬಗ್ಗೆ ಗುಮಾನಿ ಒಂದು ಹರಿದಾಡ್ತಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಈಗಾಗಲೇ ಚಿತ್ರದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಅನೇಕ ಚಿತ್ರಗಳ ಶೂಟಿಂಗ್ ಶುರುವಾಗಿದೆ.
ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ಪ್ಯಾಮಟಮ್ ಶೂಟಿಂಗ್ ಶುರುವಾದ ಬೆನ್ನಲ್ಲೇ ಕೆ.ಜಿಎಫ್ ಚಿತ್ರದ ಚಿತ್ರೀಕರಣವೂ ಪ್ರಾರಂಭವಾಗಿದೆ.
ಅಲ್ಲದೇ ಅಧೀರನ ಲುಕ್ ಅನಾವರಣಗೊಳಿಸಿದ ಮೇಲಂತೂ ಚಿತ್ರದ ಬಗೆಗಿನ ಕ್ರೇಜ್ ದುಪ್ಪಟ್ಟಾಗಿದೆ.
ಹೀಗಿರೋವಾಗ ಚಿತ್ರದ ಇನ್ನಷ್ಟು ಅಪಡೇಟ್ಸ್ ಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಇದೀಗ ಕೆಜಿಎಫ್ 2 ಚಿತ್ರದ ಟೀಸರ್ ದಸರಾ ಹಬ್ಬಕ್ಕೆ ಲಾಂಚ್ ಆಗಲಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಲ್ಲಿ ಹೀಗೊಂದು ಸುದ್ದಿ ಹರಿದಾಡ್ತಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಹಾಗೇನಾದರೂ ದಸರಾ ಗೆ ಟೀಸರ್ ರಿಲೀಸ್ ಆಗಿದ್ದೇ ಆದರೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ನವರಾತ್ರಿಯ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿ ಸಿಕ್ಕಂತಾಗುತ್ತೆ.
https://youtu.be/K87Jgl1heIo