‘ಕೆಜಿಎಫ್-2 ಆರ್ಭಟಕ್ಕೆ ಯೂಟ್ಯೂಬ್ ರೆಕಾರ್ಡ್ಸ್ ಧೂಳಿಪಟ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೆಜಿಎಫ್-2’ ಚಿತ್ರ ಕೇವಲ 24 ಗಂಟೆಗಳಲ್ಲಿ 109 ಮಿಲಿಯನ್ ವೀಕ್ಷಣೆ ಪಡೆದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದೆ. ಇದುವರೆಗೂ ಯಾವ ಸಿನಿಮಾಗೂ ಸಿಗದಷ್ಟು ಲೈಕ್ಸ್, ಕಮೆಂಟ್ಸ್ ವೀವ್ಸ್ ಪಡೆದುಕೊಂಡಿದೆ.
ಅಭಿಮಾನಿಗಳು ಟ್ರೇಲರ್ ನೋಡಿ ಸಖತ್ ಇಷ್ಟಪಟ್ಟಿದ್ದಾರೆ, ಚಿತ್ರ ಹಾಲಿವುಡ್ ರೇಂಜ್ ಗೆ ಇದೆ ಎಂದು ಬಾಯ್ತುಂಬಾ ಹೊಗಳುತ್ತಿದ್ದಾರೆ. ಬಾಹುಬಲಿ 2 , ಸಾಹೋ , RRR , ಪುಷ್ಪ ದಂತಹ ಸೂಪರ್ ಹಿಟ್ ಸಿನಿಮಾಗಳ ಹೆಸರಲ್ಲಿದ್ದ ದಾಖಲೆಗಳನ್ನ ಉಡೀಸ್ ಮಾಡಿದೆ.
ಕನ್ನಡಕ್ಕಿಂತ ತೆಲುಗು, ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರೋದು ಒಂದೆಡೆಯಾದ್ರೆ ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ನ ವೀಕ್ಷಣೆಗಳನ್ನ ಒಟ್ಟುಗೂಡಿಸಿ ಹೇಳುವುದಾದ್ರೆ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಟ್ರೈಲರ್ ಬರೋಬ್ಬರಿ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ. ಈ ಹಿಂದೆ ರಾಧೆ ಶ್ಯಾಮ್ ಸಿನಿಮಾದ ಟ್ರೈಲರ್ ಬರೆದಿದ್ದ ದಾಖಲೆಯನ್ನು ಹಿಂದಿಕ್ಕಿ ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ದಾಖಲೆ ಬರೆದಿದೆ.
ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ಕನ್ನಡದಲ್ಲಿ 1.8 ಕೋಟಿ, ತೆಲುಗಿನಲ್ಲಿ 2 ಕೋಟಿ, ತಮಿಳಿನಲ್ಲಿ 1.2 ಕೋಟಿ, ಮಲೆಯಾಳಂನಲ್ಲಿ 80 ಲಕ್ಷ , ಹಿಂದಿಯಲ್ಲಿ 5.1 ಕೋಟಿ ವೀಕ್ಷಣೆಗಳನ್ನು ಪಡೆದಿದೆ.
ಕೆಜಿಎಫ್ ಚ್ಯಾಪ್ಟರ್ 2 ಟೀಸರ್ ಬಿಡುಗಡೆಯಾದಾಗಲೂ ಕೇವಲ 24 ಗಂಟೆಗಳಲ್ಲಿ 7 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಇಲ್ಲಿಯವರೆಗೆ ಇದರ ಟೀಸರ್ 200 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು , ಅಭಿಮಾನಿಗಳು ಈಗಿನಿಂದಲೇ ಕೌಂಟ್ ಡೌನ್ ಶುರು ಮಾಡಿದ್ದಾರೆ..