ಕೆಜಿಎಫ್ – 2 Trailer May I Come in
ಭಾರತದ ಮೋಸ್ಟ್ ಆಂಟಿಸಿಪೇಡ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಏಪ್ರಿಲ್ 14ರಂದು ರಿಲೀಸ್ ಆಗಲಿದೆ. ಇಂದು ಚಿತ್ರದ ಟ್ರೇಲರ್ ಸಂಜೆ 6.45ಕ್ಕೆ ರಿಲೀಸ್ ಆಗಲಿದೆ. ಈ ನಡುವೆ ಟ್ರೈಲರ್ ಅನ್ನು ಬಹಳ ಗ್ರ್ಯಾಂಡ್ ಆಗಿ ಲಾಂಚ್ ಮಾಡುವ ನಿಟ್ಟಿನಲ್ಲಿ ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ. 5 ಭಾಷೆಗಳ ಟ್ರೈಲರ್ ಒಟ್ಟಿಗೆ ರಿಲೀಸ್ ಆಗಲಿದ್ದು, ಕಾರ್ಯಕ್ರಮದಲ್ಲಿ ಕಲಾವಿದರ ದಂಡೇ ಇರಲಿದೆ.
ಇನ್ನೂ ಟ್ರೈಲರ್ ಬಿಡುಗಡೆಗೆ 5 ಭಾಷೆಯ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಒರಾಯನ್ ಮಾಲ್ನಲ್ಲಿ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೈಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಭಾಷೆಯ ಪತ್ರಕರ್ತರು ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಅಂದಹಾಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಆಗಮಿಸಲಿದ್ದು, ಹಾಗೇ ಬಾಲಿವುಡ್ ನ ಸ್ಟಾರ್ ನಿರ್ದೇಶಕ ಕರಣ್ ಜೋಹರ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋದು ವಿಶೇಷ. ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಸ್ಟಾರ್ ನಟರು ಹಾಗೂ ರಾಜಕಾರಣಿಗಳು ಸಹ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.
ಅಷ್ಟೇ ಅಲ್ಲದೇ ಬಾಲಿವುಡ್ ನ ದಾದಾ ಸಂಜಯ್ ದತ್, ರವೀನಾ ಟಂಡನ್, ಮಾಲಿವುಡ್ ನಪೃಥ್ವಿರಾಜ್, ಚಿತ್ರದ ನಾಯಕ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿಲಿದ್ದಾರೆ.