ದಾಖಲೆ ಮೇಲೆ ದಾಖಲೆ ಬರೆದ ‘ಕೆಜಿಎಫ್ 2’ ಟ್ರೇಲರ್ : ಹೊಸ ದಾಖಲೆ – ಅತಿ ಹೆಚ್ಚು ಜನರಿಂದ ವೀಕ್ಷಣೆ
ಇಡೀ ಭಾರತೀಯ ಸಿನಿಮಾರಂಗವೇ ಕಾಯುತ್ತಿರುವ KGF ಚಾಪ್ಟರ್ 2 ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದಾಗ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿ ವಿಶ್ವ ದಾಖಲೆ ಸೃಷ್ಟಿ ಮಾಡಿತ್ತು.. ರಾಖಿ ಭಾಯ್ ಖದರ್ ಗೆ ಅಭಿಮಾನಿಗಳು ಫಿದಾ ಆಗಿದ್ರು.. ಇದೀಗ ‘ಕೆಜಿಎಫ್ 2’ ಟ್ರೇಲರ್ ಮತ್ತೊಂದು ಹೊಸ ದಾಖಲೆ ಮಾಡಿದೆ.
ಹೌದು.. ಅತಿ ಹೆಚ್ಚು ಜನರಿಂದ ವೀಕ್ಷಣೆಗೊಳಗಾದ ಭಾರತದ ಸಿನಿಮಾ ಟ್ರೇಲರ್ ಎಂಬ ಖ್ಯಾತಿ ಕೆಜಿಎಫ್ 2 ಸಿನಿಮಾ ಪಾಲಾಗಿದೆ.. ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನ ನೋಡಿದ ಟ್ರೇಲರ್ ಸಹ ಇದೇ ಆಗಿದ್ದು ಇದು ನಮ್ಮ ಕನ್ನಡದ ಸಿನಿಮಾ ಎಂಬುದು ಹೆಮ್ಮೆಯ ವಿಚಾರವಾಗಿದೆ. ಟ್ರೇಲರ್ ಬಿಡುಗಡೆ ಆಗಿ 4 ತಿಂಗಳ ಬಳಿಕ ಈಗ ಮತ್ತೊಂದು ಭರ್ಜರಿ ದಾಖಲೆ ಬರೆದಿದೆ ಈ ವಿಚಾರವನ್ನ ಕೆಜಿಎಫ್ 2 ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
‘ಕೆಜಿಎಫ್ 2’ ಸಿನಿಮಾದ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. ಭಾರತದ ಇನ್ನಾವುದೇ ಟ್ರೇಲರ್ ಗೆ ಇಷ್ಟು ಕಮೆಂಟ್ಸ್ ಬಂದಿಲ್ಲ.. ‘ಕೆಜಿಎಫ್ 2’ ಟ್ರೇಲರ್ ಅನ್ನು 18 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದೂ ಸಹ ದಾಖಲೆಯೇ. ಇನ್ನೂ ಬುಕ್ ಮೈ ಶೋನಲ್ಲಿ ಅತಿ ಹೆಚ್ಚು ಜನ ನೋಡಲು ಬಯಸಿರುವ ಸಿನಿಮಾ ಸಹ ‘ಕೆಜಿಎಫ್ 2’ ಆಗಿದೆ.
ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಇನ್ನೂ ಹಲವಾರು ಪ್ರಮುಖ ನಟರು ನಟಿಸಿದ್ದಾರೆ. ಕಿಂಗ್ ಮೇಕರ್ ಪ್ರಶಾಂತ್ ನೀಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜುಲೈ 16 ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು.. ಆದ್ರೆ ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯೆತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.