KGF | ಗಲ್ಲಾಪೆಟ್ಟಿಗೆಯಲ್ಲಿ ಕೆಜಿಎಫ್ ಚಾಪ್ಟರ್ 2 ದಂಡಯಾತ್ರೆ
ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಕಲೆಕ್ಷನ್‌ಗಳ ಸುನಾಮಿ ಈಗ ದೊಡ್ಡ ಮಟ್ಟದಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಬೌಂಡರಿಗಳನ್ನು ದಾಟಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಬಿಡುಗಡೆ ದಿನದಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿರುವ ಕೆಜಿಎಫ್ ಚಾಪ್ಟರ್ 2 ಎರಡು ದಿನದಲ್ಲಿ 250 ಕೋಟಿ ಗಳಿಸಿದ್ದು, ಮೂರನೇ ದಿನ 150 ಕೋಟಿ ದೋಚಿದೆ.
ಈ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ, ಕೆಜಿಎಫ್ 2 ವಿಶ್ವದಾದ್ಯಂತ 400 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.
ಬಾಲಿವುಡ್ ನಲ್ಲೂ ರಾಖಿಭಾಯ್ ಹವಾ ಮುಂದುವರೆದಿದೆ. ಹಿಂದಿಯಲ್ಲಿ ಎರಡು ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಈ ಚಿತ್ರ ಮೂರನೇ ದಿನ 43 ಕೋಟಿ ಗಳಿಸಿದೆ. ವಾರಾಂತ್ಯದಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. kgf-chapter-2-day-3-box-office-collection









