KGF – 2 | ಮಾರ್ಚ್ 21ಕ್ಕೆ ಕೆಜಿಎಫ್ ಸಿನಿಮಾದ ತೂಫಾನ್ ಲಿರಿಕಲ್ ಸಾಂಗ್
ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ವಿಶ್ವದಾದ್ಯಂತ ಸಿನಿಮಾ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಈ ಸಿನಿಮಾದ ಒಂದೊಂದು ಅಪ್ ಡೇಟ್ ಗಾಗಿ ರಾಖಿಭಾಯ್ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಈ ಮಧ್ಯೆ ಮಾರ್ಚ್ 21ರಂದು ಬಹು ನಿರೀಕ್ಷಿತ “ಕೆ.ಜಿ.ಎಫ್ ೨” ಚಿತ್ರದ ತೂಫಾನ್ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ, “ಕೆ.ಜಿ.ಎಫ್ ೨” ಚಿತ್ರದ ತೂಫನ್ ಲಿರಿಕಲ್ ವಿಡಿಯೋ ಸಾಂಗ್ ಮಾರ್ಚ್ 21ರಂದು ಬೆ.11.7ಕ್ಕೆ ಬಿಡುಗಡೆಯಾಗಲಿದೆ.
ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿದೆ.
ಏಪ್ರಿಲ್ 14ರಂದು ಈ ಚಿತ್ರ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. KGF Chapter 2 Update- Toofan To Storm Excitement Among Fans







