KGF ಚಾಪ್ಟರ್ 3 ಸಿನಿಮಾದ BIGGEST ನ್ಯೂಸ್..!

1 min read
kgf-chapter-3-cinema-biggest-news saaksha tv

KGF ಚಾಪ್ಟರ್ 3 ಸಿನಿಮಾದ BIGGEST ನ್ಯೂಸ್..!

ಕೆಜಿಎಫ್  ಚಾಪ್ಟರ್ 2 ಸಿನಿಮಾ ಗುರುವಾರ ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತುಫಾನ್ ಎಬ್ಬಿಸಿದೆ.

ಔಟ್ ಅಂಡ್ ಔಟ್ ಮಾಸ್ ಆಕ್ಷನ್  ಎಂಟರ್ ಟೈನರ್ ಆಗಿ ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿಯೂ ಅದ್ಭುತ ರೆಸ್ಪಾನ್ಸ್  ಪಡೆದುಕೊಳ್ಳುತ್ತಿದೆ.

ಆದ್ರೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೊನೆಯಲ್ಲಿ ಕೆಜಿಎಫ್ ಚಾಪ್ಟರ್ 3 ಕೂಡ ಇರುತ್ತದೆ ಅಂತಾ ನಿರ್ದೇಶಕ ಪ್ರಶಾಂತ್ ನೀಲ್ ಪರೋಕ್ಷವಾಗಿ ಒಂದು ಇಂಟ್ ಕೊಟ್ಟಿದ್ದಾರೆ.

ಪ್ರಸ್ತುತ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಠಿಸುತ್ತಿದೆ.

ಅಂದಹಾಗೆ ಈ ಸಿನಿಮಾದಲ್ಲಿ ಕೆಜಿಎಫ್ ಚಾಪ್ಟರ್ 3 ಸಿನಿಮಾದ ಸ್ಟೋರಿ ಎಲ್ಲಿ ನಡೆಯುತ್ತದೋ ಎಂದು ಹೇಳಿದ್ದಾರೆ.

kgf-chapter-3-cinema-biggest-news saaksha tv

ಇಲ್ಲಿವರೆಗೂ ಇಂಡಿಯಾದಲ್ಲಿ ನಡೆದ ಕೆಜಿಎಫ್ ಕಥೆ ಈ ಚಾಪ್ಟರ್ 3 ನಲ್ಲಿ ಇಂಟರ್ ನ್ಯಾಷನಲ್ ಲೆವೆಲ್ ಇರುತ್ತದೆ. ಅದಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೊನೆಯಲ್ಲಿ ಒಂದು  ಸುಳಿವು ಕೊಟ್ಟಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ರಾಕಿಭಾಯ್ ಬರುತ್ತಿದ್ದರೇ ಆತನ ಹಡಗನ್ನು ಅಮೆರಿಕಾ, ಇಂಡೋನೇಷಿಯಾ ದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಚೇಸಿಂಗ್ ಮಾಡುತ್ತಿರುತ್ತಾರೆ.

ರಾಕಿಭಾಯ್ ಸಾಮ್ರಾಜ್ಯ ವಿದೇಶದಲ್ಲಿ ಕೂಡ ವಿಸ್ತರಿಸಿದಂತೆ ತೋರಿಸಲಾಗಿದೆ. ಜೊತೆಗೆ ರಾಕಿ ಬಗ್ಗೆ ಭಾರತದ ಪ್ರಧಾನಿಗೆ ಅಮೆರಿಕ ದೂರು ನೀಡಿದಂತಿದೆ.

ಇವುಗಳನ್ನು ನೋಡಿದ ಸಿನಿಮಾ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 3 ಕೂಡ ಬರುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಮಾಡುತ್ತಿದ್ದಾರೆ.

ಆದ್ರೆ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಕೆಜಿಎಫ್ ಚಾಪ್ಟರ್ 3 ಬಗ್ಗೆ ಒಂದು ಸ್ಪಷ್ಟತೆ ಬರಲಿದೆ. kgf-chapter-3-cinema-biggest-news

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd