ಕೆಜಿಎಫ್ -2 ಫಸ್ಟ್ ಲುಕ್ ಟೀಸರ್ ರಿಲೀಸ್ ಡೇಟ್ ಫಿಕ್ಸ್
ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಸಿನಿ ಪ್ರಿಯರಿಗೆ ಕೆಜಿಎಫ್ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ.
ಇದೇ ಡಿಸೆಂಬರ್ 21 ರಂದು ಬಿಗ್ ಸಪ್ರ್ರೈಸ್ ನೀಡೋದಾಗಿ ಚಿತ್ರತಂಡ ತಿಳಿಸಿದೆ. ಈ ಕುರಿತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಆ ಸಪ್ರ್ರೈಸ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಅಂತಲೇ ಹೇಳಲಾಗುತ್ತಿದೆ. ಯಾಕೆಂದ್ರೆ 2018 ಡಿಸೆಂಬರ್ 21 ರಂದು ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ ಚರಿತ್ರೆ ಸೃಷ್ಠಿಸಿತ್ತು.
ಇದೀಗ ಅದೇ ಡೇಟ್ ಗೆ ಚಿತ್ರತಂಡ ಸಪ್ರ್ರೈಸ್ ನೀಡೋದಾಗಿ ತಿಳಿಸಿರೋದು ಭಾರಿ ಕುತುಹೂಲ ಕೆರಳಿಸಿದೆ.
ಇನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು.
ಕೋಟ್ಯಾಂತರ ಸಿನಿಪ್ರಿಯರು ಈ ಸಿನಿಮಾಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ ಒಂದರಲ್ಲಿ ಪ್ರಶಾಂತ್ ನೀಲ್ – ರಾಖಿ ಬಾಯ್ ಜೋಡಿ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಿತ್ತು.
ಅಲ್ಲದೆ ಗಲ್ಲ ಪಟ್ಟಿಗೆಯಲ್ಲೂ ಭಾರಿ ಸದ್ದು ಮಾಡಿತ್ತು. ಇದೇ ಕಾರಣಕ್ಕಾಗಿ ಈ ಕೆಜಿಎಫ್ ಚಾಪ್ಟರ್ 2ಗಾಗಿ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel