Srinidhi Shetty : ಭಾರಿ ಸಂಭಾವನೆ ಕೇಳುತ್ತಿರುವ ಕೆಜಿಎಫ್ ಬೆಡಗಿ..

1 min read
kgf-heroine-srinidhi-shetty-hikes-her-remuneration saaksha tv

kgf-heroine-srinidhi-shetty-hikes-her-remuneration saaksha tv

Srinidhi Shetty : ಭಾರಿ ಸಂಭಾವನೆ ಕೇಳುತ್ತಿರುವ ಕೆಜಿಎಫ್ ಬೆಡಗಿ..

ಕನ್ನಡದ ಚೆಲುವೆ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸರಣಿಯ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಮಾಡೆಲ್ ಆಗಿ ಮಿಂಚುತ್ತಿರುವಾಗಲೇ ಕೆಜಿಎಫ್ ಸಿನಿಮಾ ಆಫರ್.. ಅದರಲ್ಲೂ ಅದು ಪ್ಯಾನ್ ಇಂಡಿಯಾ ಸಿನಿಮಾ.

ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಶ್ರೀನಿಧ ಅವರ ಕ್ರೇಜ್ ಕೂಡ ಡಬಲ್ ಆಗಿದೆ. ಹೀಗಾಗಿ ಅವರಿಗೆ ಬೇರೆ ಸಿನಿಮಾಗಳ ಆಫರ್ ಗಳು ಕೂಡ ದಂಡಿಯಾಗಿ ಬರುತ್ತಿವೆ.

ಹೀಗೆ ಬರುತ್ತಿರುವ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳದ ನಟಿ, ಎಚ್ಚರಿಕೆಯ ಹೆಜ್ಜೆ ಹಾಕುತ್ತಿದ್ದಾರಂತೆ.

kgf-heroine-srinidhi-shetty-hikes-her-remuneration saaksha tv
kgf-heroine-srinidhi-shetty-hikes-her-remuneration saaksha tv

ಜೊತೆಗೆ ತಮ್ಮ ಸಂಭಾವನೆಯನ್ನೂ ಕೂಡ ಹೆಚ್ಚಿಸಿಕೊಂಡಿದ್ದಾರೆ ಅನ್ನೋದು ಸಿನಿಮಾ ದುನಿಯಾದ ಮಾತುಗಳಾಗಿವೆ.

ಸದ್ಯ ಸ್ಟಾರ್ ಹೀರೋಯಿನ್ ಗಳು ತೆಗೆದುಕೊಳ್ಳುತ್ತಿರುವ ಸಂಭಾವನೆಗೆ ಸರಿಸಮನಾದ ಎರಡು ಚಿತ್ರಗಳಿಗೆ ಶ್ರೀನಿಧಿ ಬೇಡಿಕೆ ಇಟ್ಟಿದ್ದಾರಂತೆ.

ಅಂದಹಾಗೆ ಕೆಜಿಎಫ್ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಚಾನಲ್ ಒಂದರಲ್ಲಿ  ನಿಮಗೆ ಫೇಮ್ ಬೇಕಾ..? ಅಥವಾ ದುಡ್ಡು ಬೇಕಾ ಎಂದು ಪ್ರಶ್ನೆ ಕೇಳಲಾಯ್ತು. ಅದಕ್ಕೆ ಥಟ್ ಅಂತಾ ಶ್ರೀ ನಿಧಿ ದುಡ್ಡು ಅಂತಾ ಉತ್ತರಿಸಿದರು.  

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd