ADVERTISEMENT
Thursday, August 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಕೆಜಿಎಫ್ ವೀರಾವೇಶ ವ್ಯರ್ಥ; ವೀರೋಚಿತ ಸೋಲು ಕಂಡ ಆರ್ ಸಿಬಿ!

ಪೂರನ್, ಸ್ಟಾಯ್ನಿಸ್ ಭರ್ಜರಿ ಬ್ಯಾಟಿಂಗ್ ಆರ್ ಸಿಬಿ ಧೂಳಿಪಟ

Author2 by Author2
April 10, 2023
in Sports, ಐಪಿಎಲ್ 2023
Share on FacebookShare on TwitterShare on WhatsappShare on Telegram

ಬೆಂಗಳೂರು : ಕೆಜಿಎಫ್ (ಕೊಹ್ಲಿ, ಗ್ಲೇನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್‌)ಭರ್ಜರಿ ಆಟಕ್ಕೆ ಲಕ್ನೋ ಶರಣಾಗುತ್ತದೆ ಎಂದೇ ಬಹುತೇಕರು ಭಾವಿಸಿದ್ದರು. ಆದರೆ, ಲಕ್ನೋ ತಂಡದ ನಿಕೊಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ KGF ಭರ್ಜರಿ ಬ್ಯಾಟಿಂಗ್‌ ಹೊರತಾಗಿಯೂ, ನಿಕೋಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಬ್ಯಾಟಿಂಗ್‌ ಅಬ್ಬರಕ್ಕೆ ಆರ್‌ಸಿಬಿ ತಂಡ ಮಕಾಡೆ ಮಲಗಿತು. ಈ ಮೂಲಕ ತವರಿನಲ್ಲಿಯೇ ಸೋತು ತೀವ್ರ ಮುಖಭಂಗ ಅನುಭವಿಸಿದ್ದು, ಐಪಿಎಲ್‌ನಲ್ಲಿ ಸತತ 2 ಪಂದ್ಯಗಳನ್ನು ಸೋತಿತು.

Related posts

sports/rishabh-pant-meets-ms-dhoni-ahead-of-sri-lanka-test-

ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

August 4, 2026
sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

August 4, 2026

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಆರ್‌ ಸಿಬಿ ತಂಡ 20 ಓವರ್‌ ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಭರ್ಜರಿ 212 212 ರನ್‌ ಗಳ ಬೃಹತ್ ಮೊತ್ತ ಕಲೆ ಹಾಕಿತು. 213 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ರೋಚಕ ಜಯ ಸಾಧಿಸಿತು.

ಚೇಸಿಂಗ್‌ ಆರಂಭಿಸಿದ ಲಕ್ನೋ ತಂಡ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಕೇಲ್‌ ಮೇಯರ್ಸ್‌, ಕೆ.ಎಲ್‌ ರಾಹುಲ್‌, ದೀಪಕ್‌ ಹೂಡಾ ಹಾಗೂ ಕೃನಾಲ್‌ ಪಾಂಡ್ಯ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತುತ್ತಾಗಿ ಪೆವಿಲಿಯನ್‌ ಸೇರಿದರು. ನಾಯಕ ಕೆ.ಎಲ್‌. ರಾಹುಲ್‌ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು. ಪರಿಣಾಮ ಲಕ್ನೋ ತಂಡ 6 ಓವರ್‌ಗಳಲ್ಲಿ 37 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡು, ಸೋಲಿನ ಭೀತಿ ಎದುರಿಸಿತ್ತು.

ಬೃಹತ್ ಮೊತ್ತ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಉತ್ತಮ ಶುಭಾರಂಭ ಸಿಗಲಿಲ್ಲ. ಕೇಲ್‌ ಮೇಯರ್ಸ್‌, ಕೆ.ಎಲ್‌. ರಾಹುಲ್‌, ದೀಪಕ್‌ ಹೂಡಾ ಹಾಗೂ ಕೃನಾಲ್‌ ಪಾಂಡ್ಯ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿ ಫೇವಲಿಯನ್ ಸೇರಿದ್ದರು. ನಾಯಕ ಕೆ.ಎಲ್‌. ರಾಹುಲ್‌ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು. ಪರಿಣಾಮ ಲಕ್ನೋ ತಂಡ 6 ಓವರ್‌ಗಳಲ್ಲಿ 37 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು.
ನಂತರ 5ನೇ ವಿಕೆಟ್‌ಗೆ ಕಣಕ್ಕಿಳಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಾರ್ಕಸ್‌ ಸ್ಟೋಯ್ನಿಸ್‌ ಉತ್ತಮ ಚೇತರಿಕೆ ನೀಡಿದರು.

ಕೇವಲ 30 ಎಸೆತಗಳಲ್ಲಿ ಭರ್ಜರಿ 65 ರನ್‌ (6 ಬೌಂಡರಿ, 5 ಸಿಕ್ಸರ್‌) ಸಿಡಿಸಿದರು. ಇದರಿಂದ ತಂಡ 10 ಓವರ್‌ಗಳ ಅಂತ್ಯಕ್ಕೆ 91 ರನ್‌ ಗಳಿಸಿತ್ತು. ನಂತರ ನಿಕೊಲಸ್‌ ಪೂರನ್‌ ಬ್ಯಾಟಿಂಗ್‌ ದಾಳಿಗೆ ಆರ್‌ಸಿಬಿ ತಂಡ ಸಂಪೂರ್ಣ ಮಂಕಾಯಿತು. ಆರ್‌ಸಿಬಿ ಬೌಲರ್‌ಗಳನ್ನು ಬಿಡದೇ ಬೆಂಡೆತ್ತಿದ್ದ ನಿಲಕೋಲಸ್‌ ಪೂರನ್‌ ಕೇವಲ 15 ಎಸೆತಗಳಲ್ಲಿ 50 ರನ್‌ ಹೊಸ ದಾಖಲೆ ಬರೆದರು. ನಿಕೋಲಸ್‌ ಪೂರನ್‌ 18 ಎಸೆತಗಳಲ್ಲಿ 62 ರನ್‌ (4 ಬೌಂಡರಿ, 7 ಸಿಕ್ಸರ್‌) ಗಳಿಸಿ ಆಡುತ್ತಿದ್ದಾಗ ಕ್ಯಾಚ್‌ ನೀಡಿ ಔಟಾದರು. ಇದರೊಂದಿಗೆ ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್‌ ಗಳಿಸಿ ತಂಡಕ್ಕೆ ನೆರವಾದರು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಆರ್‌ಸಿಬಿ ತಂಡಕ್ಕೆ ಜಯಕ್ಕೆ ಮತ್ತೆ ಜೀವ ಬಂದಂತಾಗಿತ್ತು.

ಆದರೆ ಕೊನೆಯಲ್ಲಿ ಜಯದೇವ್‌ ಉನಾದ್ಕಟ್‌ 9 ರನ್‌ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು, 2 ಎಸೆತಗಳಲ್ಲಿ 1 ರನ್‌ ಬೇಕಿದ್ದಾಗಲೇ ಉನಾದ್ಕಟ್‌ ಕ್ಯಾಚ್‌ ನೀಡಿದ್ದರು. ಕೊನೆಯ ಓಂದು ಎಸೆತಕ್ಕೆ ಒಂದು ರನ್‌ ಬೇಕಿದ್ದಾಗ ಅವೇಶ್‌ ಖಾನ್‌ ಕೊನೆಯ ಎಸೆತ ಎದುರಿಸುವಲ್ಲಿ ವಿಫಲರಾದರು. ಆದರೆ ಬೈಸ್‌ ರನ್‌ ಕದಿಯುವ ಮೂಲಕ ಲಕ್ನೋ ತಂಡ ಜಯ ಸಾಧಿಸಿತು. ಆರ್‌ಸಿಬಿ ಪರ ಮೊಹಮ್ಮದ್‌ ಸಿರಾಜ್‌, ವೇಯ್ನ್ ಪಾರ್ನೆಲ್ ತಲಾ 3 ವಿಕೆಟ್‌ ಕಿತ್ತರೆ, ಕರಣ್‌ ಶರ್ಮಾ 1 ವಿಕೆಟ್‌, ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಿತ್ತರು.

ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಆರ್‌ಸಿಬಿ ತಂಡಕ್ಕೆ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಈ ಜೋಡಿ 11.3 ಓವರ್‌ಗಳಲ್ಲಿ 96 ರನ್‌ ಗಳಿಸಿತ್ತು. ಈ ವೇಳೆ ವಿರಾಟ್‌ 61 ರನ್‌ (44 ಎಸೆತ, 4 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು.

ನಂತರ ಜೊತೆಯಾದ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಫಾಫ್‌ ಡುಪ್ಲೆಸಿಸ್‌ ಜೋಡಿ ಲಕ್ನೋ ಬೌಲರ್‌ಗಳನ್ನು ಬೆಂಡೆತ್ತಿದರು 50 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 115 ರನ್‌ ಸಿಡಿಸಿತ್ತು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಫಾಫ್ ಡುಪ್ಲೆಸಿಸ್ ನಂತರ ಅಬ್ಬರಿಸಿದರು. ರವಿ ಬಿಷ್ಣೋಯಿ ಓವರ್ ನಲ್ಲಿ 115 ಮೀಟರ್ ಸಿಕ್ಸರ್ ಸಿಡಿಸಿ ಮಿಂಚಿದರು. 203 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದರು. ಮ್ಯಾಕ್ಟ್‌ವೆಲ್‌ 29 ಎಸೆತಗಳಲ್ಲಿ ಸ್ಫೋಟಕ 59 ರನ್‌ (6 ಸಿಕ್ಸರ್‌, 3 ಬೌಂಡರಿ) ಚಚ್ಚಿ ಕೊನೆಯಲ್ಲಿ ಒಂದು ಎಸೆತ ಬಾಕಿಯಿರುವಂತೆ ಔಟಾದರು. 171 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಫಾಫ್‌ ಡುಪ್ಲೆಸಿಸ್‌ 46 ಎಸೆತಗಳಲ್ಲಿ 79 ರನ್‌ (5 ಸಿಕ್ಸರ್‌, 5 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.
ಲಕ್ನೋ ಸೂಪರ್‌ ಜೈಂಟ್ಸ್‌ ಪರ ಮಾರ್ಕ್‌ವುಡ್‌, ಅಮಿತ್‌ ಮಿಶ್ರಾ ತಲಾ ಒಂದೊಂದು ವಿಕೆಟ್‌ ಪಡೆದರು.

Tags: KGF is a waste of valor; RCB suffered a heroic defeat!
ShareTweetSendShare
Join us on:

Related Posts

sports/rishabh-pant-meets-ms-dhoni-ahead-of-sri-lanka-test-

ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

by admin
August 4, 2026
0

ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ....

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

by admin
August 4, 2026
0

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ...

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

by admin
August 4, 2026
0

ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

by admin
August 3, 2026
0

  ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್  ಬೌಲರ್ ಮತ್ತೆ ಗಾಯದಿಂದ ಬಳುತ್ತಿದ್ದಾರೆ. ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಮುಂಬರುವ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ....

glasgow-commonwealth-games-2026-india-medals-nita-ambani-congratulates

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಮೋಘ ಸಾಧನೆಗೆ ನೀತಾ ಅಂಬಾನಿ ಅಭಿನಂದನೆ

by admin
August 3, 2026
0

  ಮುಂಬೈ, ಆಗಸ್ಟ್ 03, 2026: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳ ಸಹಿತ ಒಟ್ಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram