#RCB ಥ್ರಿಲ್ಲಿಂಗ್ ನ್ಯೂಸ್.. ಏನಿದು RCB KGF collab

1 min read
KGF makers Hombale Films RCB join hands to create blend of sport saaksha tv

RCB ಥ್ರಿಲ್ಲಿಂಗ್ ನ್ಯೂಸ್..

ಏನಿದು RCB KGF collab

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಜಿಎಫ್ ಸಿನಿಮಾ ಕರ್ನಾಟಕದ ಹೆಮ್ಮೆ.!!  ಕ್ರಿಕೆಟ್ ಮತ್ತು ಸಿನಿಮಾ ಜಗತ್ತಿನಲ್ಲಿ ವಿಶ್ವಕ್ಕೆ ಬೆಂಗಳೂರು ಮತ್ತು ಕರ್ನಾಟಕವನ್ನು ಪರಿಚಯಿಸಿದ ಕೀರ್ತಿ ಮತ್ತು ಶ್ರೇಯ  ಆರ್ ಸಿಬಿ ಮತ್ತು ಕೆಜಿಎಫ್ ಸಿನಿಮಾಗೆ ಸಲ್ಲುತ್ತದೆ.  ಹೀಗಾಗಿಯೇ ಕನ್ನಡಿಗರು ಈ ಎರಡನ್ನೂ ತಲೆಯ ಮೇಲೆ ಹೊತ್ತಿಕೊಂಡು ಮೆರೆಸುತ್ತಿದ್ದಾರೆ.     

ಮೊದಲು  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಹೇಳೋದಾದ್ರೆ,  ಆರ್ ಸಿಬಿ ಇಂಡಿಯನ್ ಪ್ರಿಮಿಯರ್ ಲೀಗ್ ನ ಸೂಪರ್ ಸ್ಟಾರ್. ಪಂದ್ಯ ಸೋತರೂ, ಗೆದ್ದರೂ ಆರ್ ಸಿಬಿಯ ಕ್ರೇಜ್ ಮಾತ್ರ ಕಡಿಮೆ ಆಗೋದೆ ಇಲ್ಲ. ಈ ಸಲ ಕಪ್ ನಮ್ದೆ ಅನ್ನೋದನ್ನ ಆರ್ ಸಿಬಿಯನ್ಸ್ ನಿಲ್ಸೋದೂ ಇಲ್ಲ. ಯಾಕಂದರೆ ಆರ್ ಸಿಬಿ ಕೋಟ್ಯಂತರ ಅಭಿಮಾನಿಗಳ ಎಮೋಷನ್..!! ಕನ್ನಡಿಗರ ಹೆಮ್ಮೆ..!!  ಇದು ಆರ್ ಸಿಬಿಯನ್ಸ್ ಅಭಿಯಾನ ಅಭಿಮಾನ..!!

ಬಹುಶಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವ ಅಭಿಮಾನಿಗಳ ಬಲ, ವಿಶ್ವದ ಯಾವುದೇ ಕ್ರಿಕೆಟ್ ತಂಡಕ್ಕೆ ಇಲ್ಲ ಅಂದರೆ ತಪ್ಪಾಗಲಾರದು. ಅದೆನೋ ಹೇಳ್ತಾರೆ ಅಲ್ವಾ.. ಪ್ರತೀ ಸೀಸನ್ ನಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾ. ಹಾಗೇ ಪ್ರತಿಬಾರಿ ಐಪಿಎಲ್ ಶುರುವಾದಗಲೂ ಹುಟ್ಟುವ ಕ್ರಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು..!!

ಆದ್ರೆ ಈ ಬಾರಿ ಆರ್ ಸಿಬಿಗೆ ಕೆಜಿಎಫ್ ಪವರ್ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೆಜಿಎಫ್ ನ ತಾಕತ್ತು ಗಮ್ಮತ್ತು ಎರಡೂ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪ್ರಕಾರ ಕೆಜಿಎಫ್ ಅಂದರೆ, ಕೆ ಅಂದ್ರೆ ಕೊಹ್ಲಿ, ಜಿ ಅಂದ್ರೆ ಗ್ಲೇನ್ ಮ್ಯಾಕ್ಸ್ ವೆಲ್, ಎಫ್ ಅಂದ್ರೆ ಫಾಪ್ ಡುಪ್ಲಸಿಸ್.   

KGF makers Hombale Films RCB join hands to create blend of sport saaksha tv

ಇನ್ನು ಕೆಜಿಎಫ್ ಬಗ್ಗೆ ಹೇಳೊದಾದ್ರೆ ಇದು ಕನ್ನಡಿಗರ ಪೊಗರು..!! ಕನ್ನಡ ಸಿನಿಮಾಗಳೆಂದರೇ ತಾತ್ಸಾರ ಮನೊಭಾವದಲ್ಲಿ ನೋಡುತ್ತಿದ್ದವರಿಗೆ ಕೆಜಿಎಫ್ ಸಿನಿಮಾ ಮುಟ್ಟಿ ನೋಡಿಕೊಳ್ಳುವಂತೆ  ಮಾಡಿದೆ. ಕನ್ನಡಿಗರ ಮತ್ತು ಕನ್ನಡ ಸಿನಿಮಾದ ತಾಕತ್ತು ಎಂಥಹದ್ದು ಅನ್ನೋದನ್ನ ಕೆಜಿಎಫ್ ಸಿನಿಮಾ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ.

ಹೀಗಾಗಿ ಈಗ ಕೆಜಿಎಫ್ ಸಿನಿಮಾದ ಹವಾ ನಡೆಯುತ್ತಿದೆ. ಇಡೀ ವಿಶ್ವದ ಸಿನಿಮಾ ಜಗತ್ತು ಕೆಜಿಎಫ್ ತುಫಾನ್ ಗಾಗಿ ಕಾಯುತ್ತಿದೆ.  ಇತ್ತ ಆರ್ ಸಿಬಿ ತಂಡದ ಕ್ರೇಜ್ ಕೂಡ ಸುನಾಮಿಯಂತಿದೆ.

ಹೀಗಾಗಿ ಹೊಂಭಾಳೆ ಫಿಲ್ಸ್ ಆರ್ ಸಿಬಿ ಜೊತೆ Collaboration ಮಾಡಿಕೊಂಡಿದೆ. ಇದು ಕನ್ನಡಿಗರಿಗೆ ಸಖತ್ ಥ್ರಿಲ್ ನೀಡುತ್ತಿದೆ.

ಏನಿದು Collaboration..?  ಇದರಿಂದ ಆಗುವ ಪ್ರಯೋಜನೆಗಳೇನು..?  ಅನ್ನೋದನ್ನ ನೋಡೋದಾದ್ರೆ.. ಕೆಜಿಎಫ್ ಸಿನಿಮಾ ಪಾತ್ರಗಳನ್ನ ಆರ್ ಸಿಬಿ ಪ್ಲೇಯರ್ ಕೈಯಲ್ಲಿ ಮಾಡಿಸೋದು. ಜೊತೆಗೆ ಕೆಜಿಎಫ್ ಸಿನಿಮಾದ ಕಂಟೆಂಟ್ ಆರ್ ಸಿಬಿ ಪೇಜ್ ನಲ್ಲಿ ಕೊಲ್ಯಾಬ್ ಮಾಡುವುದು. ಆರ್ ಸಿಬಿ ಪೇಚ್ ನಲ್ಲಿ ಪೋಸ್ಟ್ ಮಾಡಿ ಹೊಂಬಾಳೆಯನ್ನ ಟ್ಯಾಗ್ ಮಾಡೋದು.   

KGF makers Hombale Films RCB join hands to create blend of sport saaksha tv

ಉದಾಹರಣೆಗೆ ಸದ್ಯ ಯಶ್ ಪಾತ್ರವನ್ನ ಕೊಹ್ಲಿ, ಅಧೀರನ ಪಾತ್ರವನ್ನ ಫಾಫ್ ಗೆ ಹೋಲಿಕೆ ಮಾಡಿ ವಿಡಿಯೋಗಳನ್ನ ಬಿಡುಗಡೆ ಮಾಡೋದು.  ಇದರಿಂದ ವಿಶ್ವದಾದ್ಯಂತ ಕೆಜಿಎಫ್ ಸಿನಿಮಾದ ಪ್ರಮೋಷನ್ ಆಗುತ್ತೆ. ಯಾಕಂದರೆ ಆರ್ ಸಿಬಿ ತಂಡಕ್ಕೆ ವಿಶ್ವದಾದ್ಯಮತ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದ್ದಾರೆ. ಹೀಗಾಗಿ ಆರ್ ಸಿಬಿ ಮಾಡುವ ಕೆಜಿಎಫ್ ಸಂಬಂಧಿತ ಪೋಸ್ಟ್ ವಿಶ್ವದಾದ್ಯಂತ ರೀಚ್ ಆಗುತ್ತೆ. ಇದರಿಂದ ಕೆಜಿಎಫ್ ಸಿನಿಮಾದ ಪ್ರಮೋಷನ್ ದೊಡ್ಡಮಟ್ಟದಲ್ಲಿ ನಡೆಯುತ್ತದೆ.    KGF makers Hombale Films RCB join hands to create blend of sport

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd