100% ಸೀಟಿಂಗ್ ಇದ್ರೆ ಏಪ್ರಿಲ್ 14ಕ್ಕೆ ‘KGF 2’ ರಿಲೀಸ್…. ಇಲ್ಲದೇ ಹೋದ್ರೆ : ಯಶ್ ಹೇಳಿದ್ದೇನು..???
ಭಾರತೀಯ ಸಿನಿಮಾರಂಗವೇ ಕಾಯುತ್ತಿರುವ ಬಹುನಿರೀಕ್ಷೆಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘KGF 2’ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ.. ಆದ್ರೆ ಕೋವಿಡ್ 3ನೇ ಅಲೆಯ ಪರಿಸ್ಥಿತಿ ಹೀಗೆ ಇದ್ರೆ ಮತ್ತೆ ರಿಲೀಸ್ ಡೇಟ್ ಪೋಸ್ಟ್ ಪೋನ್ ಆದ್ರೂ ಆಗಬಹುದು.. ಅಂದ್ಹಾಗೆ ಎಲ್ಲಾ ಅಂದುಕೊಂಡಂತೆ ಇದ್ದಿದ್ರೆ ಸಿನಿಮಾ ಯಾವಾಗ್ಲೋ ರಿಲೀಸ್ ಆಗಿ ಬಿಡಬೇಕಿತ್ತು.. ಆದ್ರೆ ಕೋವಿಡ್ ಹಾವಳಿಯಿಂದ ರಿಲೀಸ್ ಗೆ ವಿಘ್ನ ಎದುರಾಗಿತ್ತು.. ಆದ್ರೂ ಮೊದಲ ಅಲೆಯ ನಂತರ ಸಿನಿಮಾ ತಂಡ ಮತ್ತೊಂದು ಹೊಸ ದಿನಾಂಕವನ್ನ ಘೋಷಣೆ ಮಾಡಿತ್ತು.. 2021ರ ಜುಲೈನಲ್ಲೇ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ಬರೆಯಬೇಕಾಗಿತ್ತು… ಆದ್ರೆ ಇದ್ದಕ್ಕಿದ್ದಂತೆ ಸಿನಿಮಾವನ್ನ ಮತ್ತೆ 8 ತಿಂಗಳು ಮುಂದೂಡಿಕೆ ಮಾಡಿ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟು ಮಾಡಿತ್ತು ಸಿನಿಮಾತಂಡ.. ಈ ಬಗ್ಗೆ ಅನೇಕ ಸವಾಲುಗಳೆದ್ದಿದ್ದವು..
ಆದ್ರೀಗ ಯಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ರಾಷ್ಟ್ರೀಯ ಮಾಧ್ಯಮಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಶ್ , ಕೆಜಿಎಫ್ 2 ಸಿನಿಮಾವನ್ನು ಎಂಟು ತಿಂಗಳು ಮುಂದೂಡಿದ್ದರ ಬಗ್ಗೆ ಜನರು ಯಾವಾಗಲೂ ನನ್ನನ್ನು ಕೇಳುತ್ತಿದ್ದರು. ಆದ್ರೆ ನಾವು ಮೊದಲೇ ಕೋವಿಡ್ 3ನೇ ಅಲೆ ಸನ್ನಿವೇಶವನ್ನ ನಿರೀಕ್ಷೆ ಮಾಡಿದ್ದೆವು. ಹೀಗಾಗಿ ನಾವು ಸುರಕ್ಷತೆಯ ದೃಷ್ಟಿಯಿಂದ ಸಿನಿಮಾವನ್ನು ಮುಂದೂಡಿದ್ದೆವು. ನನಗೆ ಮೂರನೇ ಅಲೆ ಬೇಗನೇ ಕಡಿಮೆ ಆಗುತ್ತೆ ಎಂಬುವ ಬಗ್ಗೆ ನಂಬಿಕೆಯಿದೆ. ವಿಶ್ವದೆಲ್ಲೆಡೆಯಿಂದ ಬಂದಿರುವ ವರದಿಯನ್ನು ಆಧರಿಸಿ ಹೇಳಿದ್ದೇನೆ ಎಂದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ..
ಅಲ್ಲದೇ ಈಗಾಗಲೇ ಘೋಷಣೆ ಮಾಡಿದಂತೆ ಏಪ್ರಿಲ್ 14ರಂದೇ ಸಿನಿಮಾ ರಿಲೀಸ್ ಆಗುತ್ತೆ. ಆದರೆ, ಚಿತ್ರಮಂದಿರ ಶೇ.100ರಷ್ಟು ಓಪನ್ ಆಗಬೇಕು ಎಂದು ಹೇಳಿದ್ದಾರೆ ಯಶ್ . ಈ ಮೂಲಕ ಸಿನಿಮಾದಲ್ಲಿ 100 % ಸೀಟಿಂಗ್ ಇದ್ರಷ್ಟೇ ಅಂದೇ ರೀಲೀಸ್ ಮಾಡಲಾಗುವುದು ಇಲ್ಲ ಮುಂದೂಡಿಕೆ ಆದ್ರೂ ಆಗಬಹುದು ಎಂಬ ಪರೋಕ್ಷ ಸುಳಿವು ನೀಡಿದ್ದಾರೆ..