‘ಖಜುರಾಹೋ ಎಂಬ ದಿಗ್ಮೂಢತೆ’-ಭಾರತದ ಸನಾತನ ವಾಸ್ತುಶಿಲ್ಪದ ನಗ್ನತೆಯ ಮೈಥುನ ಕೆತ್ತನೆಯಾಚೆಗಿನ ಕೌತಕದ ಸಂಗತಿಗಳು: Saakshatv vishwa vismaya episode5
ಕ್ರಿ.ಶ ಒಂಭತ್ತನೇ ಶತಮಾನದ ಪ್ರಸಿದ್ಧ ಚಾಂಡೇಲ ರಾಜಮನೆತನದವರಿಂದ ನಿರ್ಮಾಣಗೊಂಡವೆನ್ನಲಾದ ಖಜುರಾಹೊ ದೇಗುಲಗಳು ಈಗಿನ ಮಧ್ಯಪ್ರದೇಶದ ಚಿತ್ತಾರ್‌ಪುರ ಜಿಲ್ಲೆಯಲ್ಲಿವೆ. ಆರಂಭದಲ್ಲಿ ಇಲ್ಲಿ ಎರಡು ಬೃಹತ್ತಾದ ಖರ್ಜೂರದ ಮರಗಳಿದ್ದ ಕಾರಣಕ್ಕೆ ಖರ್ಜೂರಪುರ್ ಅಥವಾ ಖರ್ಜುರಾಹೊ ಎಂಬ ಹೆಸರು ಬೆಳೆದು ಬಂತು ಎನ್ನುವ ಉಲ್ಲೇಖಗಳಿವೆ.

ಖರ್ಜೂರವಾಹಕ ಎಂಬುದು ಶಿವನ ಉಪನಾಮೆಗಳಲ್ಲೊಂದಾದ್ದರಿಂದ ಖಜುರಾಹೊ ಆಗಿ ಅದೇ ರೂಢಿಗೆ ಬಂದಿರಬಹುದೆಂಬುದು ಇನ್ನೊಂದು ವಾದವಿದೆ. Saakshatv vishwa vismaya episode5
ರಾಜಾ ನನ್ನುಕ ಅಥವಾ ಚಂದ್ರವರ್ಮನ್ ನಿಂದ ಕ್ರಿ.ಶ 831 ರಲ್ಲಿ ಸ್ಥಾಪನೆಯಾದ ಚಾಂಡೇಲ ರಾಜವಂಶವು ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೆ ಈ ದಿವ್ಯ ದೇಗುಲಗಳ ನಿರ್ಮಾಣ ಕಾರ್ಯವನ್ನ ಶುರು ಮಾಡಿತು. ಅಂದಿಗೆ 30 ಚದರ ಕಿ.ಮಿ ವ್ಯಾಸದಲ್ಲಿ ಸುಮಾರು 87 ದೇಗುಲಗಳಿದ್ದವು. ಹದಿಮೂರನೇ ಶತಮಾನದ ದೆಹಲಿ ಸುಲ್ತಾನರ ಏಳಿಗೆಯ ನಂತರ ಅವರ ಕತ್ತಿಯೇಟಿಗೆ ಇಲ್ಲಿನ ಹಲವು ದೇಗುಲಗಳು ನಾಶವಾಗಿ ಇಂದು ಕೇವಲ 23 ದೇಗುಲಗಳು ಮಾತ್ರ ಉಳಿದಿವೆ.

ಖಾಂಡರೀಯ ಮಹಾದೇವ ಮಂದಿರ ಇಲ್ಲಿನ ಬೃಹತ್ ದೇಗುಲ. ಇದು ಕ್ರಿ.ಶ ಹತ್ತರಲ್ಲಿ ರಾಜಾ ವಿದ್ಯಾಧರನಿಂದ ನಿರ್ಮಾಣವಾಯ್ತು. ಅತಿ ಹೆಚ್ಚು ನಗ್ನ ಹಾಗೂ ಮಿಥುನ ಶಿಲ್ಪಗಳನ್ನ ಒಳಗೊಂಡ ದೇಗುಲ ಇದು. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆಂಬ ನಾಲ್ಕು ಜೈವಿಕ ಕರ್ಮ ಅಥವಾ ಜೀವನದ ಪಾರಮಾರ್ಥಗಳಲ್ಲಿ ನಂಬಿಕೆ ಇಟ್ಟಿದ್ದ ಭಾರತೀಯರ ಜನಜೀವನವೆ ಈ ಮಿಥುನ ಶಿಲ್ಪಗಳ ಮೂಲಕ ಜಗಜ್ಜಾಹೀರಾಗಿದೆ.
ಗಂಡು ಹೆಣ್ಣಿನ ಮಿಲನವು ಶಿವ ಶಕ್ತಿ ಎರಡರ ದಿವ್ಯ ಹಾಗೂ ಆಧ್ಯಾತ್ಮಿಕ ಸಮ್ಮಿಲನದ ಸಂಕೇತವಾಗಿ ಈ ಕೆತ್ತನೆಗಳು ರಚಿಸಲ್ಪಟ್ಟಿವೆ. ಪವಿತ್ರ ದೇವಸ್ಥಾನದ ಒಳಭಾಗಕ್ಕೆ ಕಾಲಿಡುವ ಮುನ್ನ ಮನಸಿನ ಕಲ್ಮಶ ಹಾಗೂ ಕೆಡುಕುಗಳನ್ನ ಅದರ ಬಾಗಿಲ ಬಳಿಯೆ ಬಿಟ್ಟು ಹೃದಯಶುದ್ಧತೆಯಿಂದ ಒಳ ಬರಬೇಕೆಂಬ ಪಾಠವನ್ನ ಈ ಕೆತ್ತನೆಗಳು ನಮಗೆ ತಿಳಿಸುತ್ತವೆ.

ಹಾಗೆಂದೆ ಇವು ಇಲ್ಲಿನ ದೇಗುಲಗಳ ಹೊರ ಕವಚದ ಮೇಲೆ ಕೆತ್ತಲ್ಪಟ್ಟಿವೆಯೆ ಹೊರತು ಒಳಗೆ ಕೆತ್ತಲ್ಪಟ್ಟಿಲ್ಲ. ಖಜುರಾಹೊ ವಿಶ್ವ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿ ಸನ್ಮಾನಿಸಲ್ಪಟ್ಟ ಭಾರತದ ಹೆಮ್ಮೆಯ ದ್ಯೋತಕ.
ಸಂಗ್ರಹ ಲೇಖನ:- ಇಂದೂಧರ್ ಒಡೆಯರ್ ಚಿತ್ರದುರ್ಗ (ಡುಗ್ಗು)
ಹವ್ಯಾಸಿ ಬರಹಗಾರ
ಸಾಕ್ಷಾ ಟಿವಿಯ ವಿಶ್ವ ವಿಸ್ಮಯ ಅಂಕಣಕಾರ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








